ರೈತನ ಸಾವು ಖಂಡಿಸಿ ಪ್ರತಿಭಟನೆ
ಮಾಲೂರು: ಬೆಳಗಾವಿಯ ಸುವರ್ಣ ಸೌಧದ ಮುಂದೆ ರೈತ ವಿಠಲ್ ಅರಬಾವಿ ಆತ್ಮಹತ್ಯೆಗೆ ಕಾರಣವಾದ ಸರ್ಕಾರದ ವೈಖರಿ ಖಂಡಿಸಿ ಸ್ಥಳೀಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಮಾರಿಕಾಂಬ ಮಹಾದ್ವಾರ ಬಳಿಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ರೈತ ಸಂಘದ ಕಾರ್ಯಕರ್ತರು, ನಂತರ ಮೆರವಣಿಗೆ ಮೂಲಕ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಅರ್ಪಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಬೆಂ.ರಮೇಶ್, ಐಟಿಬಿಟಿ ಕಾರ್ಖಾನೆ ಗಳಿಗೆ ತರಾತುರಿ ಸ್ವಂದಿಸುವ ರಾಜ್ಯ ಸರ್ಕಾರ ದೇಶದ ಬೆನ್ನಲಬು ಎನ್ನುವ ರೈತನ ಕಷ್ಟಗಳಿಗೆ ಎಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಕಾರ್ಯದರ್ಶಿ ತಿ.ದೇವರಾಜ್, ಕೋಡೂರು ಗೋಪಾಲ್, ನಿದರಮಂಗಲ ನಾಗಪ್ಪ, ವರದಾಪುರ ನಾಗರಾಜ್, ವಿಶ್ವನಾಥ್ ಇದ್ದರು.