ಅಬ್ಬೇನಹಳ್ಳಿಯಲ್ಲಿ ಕುಡಿಯೋದು ಕೊಳಚೆ ನೀರು
ಮಾಲೂರು: ತಾಲೂಕಿನ ಅಬ್ಬೇನಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನಲ್ಲಿ ಕೊಳಚೆ ನೀರು ಬರುತ್ತಿದ್ದು, ಈ ಬಗ್ಗೆ ಪಂಚಾಯ್ತಿಗೆ ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಪಾದಿಸಿ ಗ್ರಾಮದ ನಿವಾಸಿಗಳು ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಅಬ್ಬೇನಹಳ್ಳಿ ಗ್ರಾಮದ ಕುವೆಂಪು ರಸ್ತೆಯಲ್ಲಿ ಕಳೆದ ಆರು ತಿಂಗಳಿಂದ ನೀರಿನ ಪೈಪ್ನಲ್ಲಿ ಚರಂಡಿ ನೀರು ಬರುತ್ತಿದ್ದು, ಈ ಸಂಬಂಧ ಪಂಚಾಯ್ತಿಯ ಗ್ರಾಮ ಲೆಕ್ಕಿಗ, ವಾಟರ್ಮ್ಯಾನ್ ಮತ್ತು ಸದಸ್ಯರಿಗೆ ತಿಳಿಸಿದ್ದರೂ ದುರಸ್ತಿ ಮಾಡಿಲ್ಲ. ಇದರಿಂದ ತೊಂದರೆಯಾಗಿದೆ ಎಂದು ಗ್ರಾಮದ ದೇವರಾಜ್,ಕೆ.ನಾರಾಯಣಸ್ವಾಮಿ, ರಾಮಕೃಷ್ಣ, ಕೆ. ರಾಮಚಂದ್ರಪ್ಪ, ಎಸ್. ನಾರಾಯಣಸ್ವಾಮಿ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿದ್ದಾರೆ.