ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಕಲಿ ವೈದ್ಯನಿಂದ ಅತ್ಯಾಚಾರ ಯತ್ನ: ಹಿಗ್ಗಾಮುಗ್ಗ ಥಳಿತ

Rashmi Kasaragodu
Updated On : 3 Dec 2013, 12:19 pm

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ನಕಲಿ ವೈದ್ಯನೊಬ್ಬ ಚಿಕಿತ್ಸೆ ನೀಡುವ ವೇಳೆ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ದೇವರಗುಡಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಈ ಕೃತ್ಯ ನಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಆರೋಪಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಗ್ರಾಮದಲ್ಲಿ ವೆಂಕಟೇಶ್ವರ ಕ್ಲಿನಿಕ್ ನಡೆಸುತ್ತಿದ್ದ ವೆಂಕಟೇಶ್ ಎಂಬಾತ ಆರೋಪಿಯಾಗಿದ್ದಾನೆ. ಈತ ನಕಲಿ ವೈದ್ಯ ಎಂಬ ಆರೋಪ ಇದೀಗ ಕೇಳಿ ಬಂದಿದೆ. ಗ್ರಾಮದ ಮುನಿಯಪ್ಪ (ಹೆಸರು ಬದಲಾಯಿಸಲಾಗಿದೆ)ಅವರ ಮಗಳು 12 ವರ್ಷದ ಬಾಲಕಿ ಜ್ವರದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ತಮ್ಮ ಸಂಬಂಧಿಕರೊಂದಿಗೆ ಕ್ಲಿನಿಕ್‌ಗೆ ಬಂದಿದ್ದಳು. ಆಸ್ಪತ್ರೆಯಲ್ಲಿದ್ದ ಆರೋಪಿ ವೈದ್ಯ ತಪಾಸಣೆ ಮಾಡಿ, ಇಂಜೆಕ್ಷನ್ ಕೊಡಬೇಕೆಂದು ಹೇಳಿ ಬಾಲಕಿಯನ್ನು ಒಳಗಿನ ಕೊಠಡಿಗೆ ಕರೆದುಕೊಂಡು ಹೋಗಿದ್ದಾನೆ. ಆಗ ಚಿಕಿತ್ಸೆಯ ಹೆಸರಿನಲ್ಲಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಬಾಲಕಿ ಪ್ರತಿರೋಧಿಸಿದರೂ ಬಲವಂತ ಮಾಡಲು ಮುಂದಾದನು ಎನ್ನಲಾಗಿದೆ. ಇದರಿಂದ ವಿಚಲಿತಳಾದ ಬಾಲಕಿ ಕಿರುಚಿಕೊಂಡು ಆಸ್ಪತ್ರೆಯಿಂದ ಹೊರಗೆ ಓಡಿ ಬಂದ ಹಿನ್ನೆಲೆಯಲ್ಲಿ ಜನ ಆಕೆಯನ್ನು ವಿಚಾರಿಸಿದ್ದು, ಆಗ ಬಾಲಕಿ ವೈದ್ಯ ವೆಂಕಟೇಶ್ ದುವರ್ತನೆ ಬಗ್ಗೆ ತಿಳಿಸಿದ್ದಾಳೆ. ಇದರಿಂದ ಕೆರಳಿದ ಗ್ರಾಮಸ್ಥರು ಅರೋಪಿ ವೈದ್ಯನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತನನ್ನು ಕಂಬಕ್ಕೆ ಕಟ್ಟಿ ಹಾಕಲು ಮುಂದಾಗಿದ್ದು ಕೆಲವರು ಹಲ್ಲೆ ಮಾಡುತ್ತಿದ್ದ ಜನರಿಂದ ವೈದ್ಯನನ್ನು ಬಿಡಿಸಲು ಯತ್ನಿಸಿದ ಸಂದರ್ಭದಲ್ಲಿ ಆರೋಪಿ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement