ವಿಕಲಚೇತನರಿಗೆ ಸಾಧನ ಸಾಮಗ್ರಿಗಳ ವಿತರಣೆ
ಕೋಲಾರ: ವಿಕಲಚೇತನರು ಸರ್ಕಾರ ನೀಡಿರುವ ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಸೇರಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಅನಿಲ್ ಕುಮಾರ್ ಕರೆ ನೀಡಿದರು. ನಗರದ ಲಯನ್ಸ್ ಕ್ಲಬ್‌ನಲ್ಲಿ ನವಚೇತನ ಆರ್ಥ್ಥೋಪಿಡಿಕ್ ಸೇವಾ ಸಂಸ್ಥೆ, ಬೆಂಗಳೂರು ಐಟಿಸಿ ಲೇಡಿಸ್ ಕ್ಲಬ್ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಕಲಚೇತನರ ಸಾಧನ ಸಲಕರಣೆಗಳ ವಿತರಣೆ ಹಾಗೂ ನವಚೇತನ ಆರ್ಥೋಪಿಡಿಕ್ ಸೇವಾ ಸಂಸ್ಥೆ ಉದ್ಘಾಟಿಸಿ ಮಾತನಾಡಿ, ಸರ್ಕಾರ ವಿದ್ಯಾಭ್ಯಾಸ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ನಿಗಧಿ ಪಡಿಸಿರುವುದರಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷವೂ ಇನ್ನು ಮುಂದೆ ರಾಜೀವ್ ಗಾಂಧಿ, ಅರಸು ಹುಟ್ಟು ಹಬ್ಬಗಳಂದು ಬುದ್ದಿ ಮಾಂದ್ಯ, ವಿಕಲಾಂಗ, ಅನಾಥ ಮಕ್ಕಳ ಶಾಲೆಗಳಿಗೆ ಸಹಾಯ ನೀಡುವ ಮೂಲಕ ಹುಟ್ಟು ಹಬ್ಬ ಆಚರಿಸಲು ತೀರ್ಮಾನ ಕೈಗೊಂಡಿದೆ ಎಂದರು. ರೇಣುದರ್, ಲಲಿತಾ ಗಣೇಶ್, ಎಚ್.ಸಿ. ನಾಗವೇಣಿ, ಮುನಿರಾಜು, ನಟರಾಜ್ ಇದ್ದರು. ವಿಕಲಚೇತನ ಮಕ್ಕಳಿಗೆ ವಿವಿಧ ರೀತಿಯ ಸಲಕರಣಗಳನ್ನು ವಿತರಿಸಲಾಯಿತು.