ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಆದ್ಯತೆ ನೀಡಿ: ರೇಣುಕಾ
ಮಾಲೂರು: ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಪುಸ್ತಕಗಳನ್ನು ಹೆಚ್ಚು ಓದುವುದರ ಮೂಲಕ ಸೃಜನಶೀಲ ಕೌಶಲ್ಯ ವೃದ್ಧಿ ಪಡಿಸಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ಹೇಳಿದರು. ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸ್ಥಳೀಯ ಚೈತನ್ಯ ಕಲಾನಿಕೇತನ ಹಮ್ಮಿಕೊಂಡಿದ್ದ 58 ನೇ ತಿಂಗಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಉಮಾದೇವಿ ಮಾತನಾಡಿ, ಪ್ರತಿ ನಿತ್ಯ ಒತ್ತಡದ ಜೀವನ ನಡೆಸುವವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಒತ್ತಡ ರಹಿತ ಜೀವನ ನಡೆಸಬೇಕು ಎಂದರು. ಕವಿ ಜ.ಮು. ಚಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಮಾಸ್ತಿ ಕೃಷ್ಣಪ್ಪ, ಟಿ.ಆರ್. ಮುನಿನಾರಾಯಣ, ಪುರಸಭೆ ವ್ಯವಸ್ಥಾಪಕಿ ಸುಶೀಲಮ್ಮ ಮಾತನಾಡಿದರು. ಕವಿಗಳಾದ ಸುರೇಶ ಜಕಾತಿ, ಸತೀಶ್ ಕಾಟೇರಿ, ನ. ಗುರುಮೂರ್ತಿ ಇದ್ದರು.