ಶಾಸಕರಿಂದ ವೋಟ್ ಬ್ಯಾಂಕ್ ರಾಜಕೀಯ
ಚಿಂತಾಮಣಿ: ಶಾಸಕರ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆ ವೋಟ್ ಬ್ಯಾಂಕ್ಗಾಗಿ ಹೊರತು ಜನಪರ ಹೋರಾಟ ಅಲ್ಲವೆಂದು ಮಾಜಿ ಶಾಸಕ ಬೆಂಬಲಿಗ ಬನಹಳ್ಳಿ ನಂಜನಗೌಡ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ಧಿ ಕೆಲಸಗಳನ್ನು ಮಾಡದ ಶಾಸಕರ ಬೆಂಬಲಿಗರು ರಾಜಕೀಯ ದುರುದ್ದೇಶದಿಂದ ಗ್ರಾಪಂ ಮಟ್ಟಕ್ಕೆ ರಾಜಕಾರಣ ಮಾಡುತ್ತಿರುವುದು ಸರಿಯಿಲ್ಲ ಎಂದು ಕಿಡಿ ಕಾರಿದರು.
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ವೋಟ್ಬ್ಯಾಂಕ್ಗಾಗಿ ಜನರನ್ನು ತಪ್ಪು ದಾರಿಗೆಳೆಯಲು ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳಾಗಲಿ, ಪಂಚಾಯ್ತಿ ಅಧ್ಯಕ್ಷ ಸದಸ್ಯರಾಗಲಿ ಹಣವನ್ನು ದುರುಪಯೋಗ ಪಡಿಸಿಕೊಂಡಿಲ್ಲವೆಂದು ಬನಹಳ್ಳಿ ನಂಜನಗೌಡ ಸ್ಪಷ್ಟೀಕರಣ ನೀಡಿದರು.
ಮಾಜಿ ಶಾಸಕ ಎಂ.ಸಿ. ಸುಧಾಕರ್ ಅವಧಿಯಲ್ಲಿ ಜನಪರ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಯಾವುದೇ ಹಗರಣಗಳು ನಡೆದಿಲ್ಲವೆಂದು ಹೇಳಿದರು. ಗ್ರಾಪಂ ಮಾಜಿ ಅಧ್ಯಕ್ಷ ಜಂಗಮಶೀಗಹಳ್ಳಿ ಮುನಿನಾರಾಯಣಪ್ಪ ಮಾತನಾಡಿದರು. ಮಾಜಿ ಶಾಸಕ ಬೆಂಬಲಿತ ಗ್ರಾಪಂ ಅಧ್ಯಕ್ಷ ಮುಬೀನ್ ತಾಜ್, ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಎನ್. ವೆಂಕಟೇಶ್, ಅಪ್ಸರ್, ರಾಧಮ್ಮರವಿ, ನಾರಾಯಣಮ್ಮ, ಎಸ್.ಸಿ. ಸರಿತಾ ಇದ್ದರು.