ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ವಚ್ಛತೆಯಿಂದ ಉತ್ತಮ ಆರೋಗ್ಯ

Rashmi Kasaragodu
Updated On : 3 Dec 2013, 12:26 pm

ಗುಡಿಬಂಡೆ: ಮನೆಯ ಸುತ್ತಮುತ್ತಲಿನ ಆವರಣ ಸ್ವಚ್ಛತೆ ಮಾಡಿದಲ್ಲಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯವೆಂದು ನ್ಯೂ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಪಿ.ಎನ್. ರಾಜಶೇಖರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಪರಿಸರ ವೇದಿಕೆ ಹಾಗೂ ನ್ಯೂ ಪಬ್ಲಿಕ್ ಶಾಲೆ ಸಹಯೋಗದಲ್ಲಿ ರಾಷ್ಟ್ರೀಯ ಸ್ವಚ್ಛತಾ ಆಂದೋಲನದಲ್ಲಿ ಮಾತನಾಡಿ, ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡಬೇಕೆಂದರು.
ಜಿಲ್ಲಾ ಪರಿಸರ ವೇದಿಕೆ ಅಧ್ಯಕ್ಷ ಗುಂಪು ಮರದ ಆನಂದ್, ಪ್ರತಿಯೊಬ್ಬರು ಗಿಡ ನೆಟ್ಟು ಪರಿಸರ ಕಾಪಾಡಬೇಕು. ವಿದ್ಯಾರ್ಥಿಗಳು ಶಾಲೆ, ದೇವಸ್ಥಾನ ಮೊದಲಾದ ಸ್ಥಳಗಳಿಲ್ಲೂ ಸ್ವಚ್ಛತೆ ಕಾಪಾಡಲು ಶ್ರಮದಾನ ಮಾಡಬೇಕು ಎಂದರು.
ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ನ್ಯೂ ಪಬ್ಲಿಕ್ ಶಾಲೆಯ ಮಕ್ಕಳು ಪಟ್ಟಣದ ಶನಿಮಹಾತ್ಮಸ್ವಾಮಿ ದೇವಾಯಲ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಿದರು. ಜಿಲ್ಲಾ ಪರಿಸರ ವೇದಿಕೆಯ ಉಪಾಧ್ಯಕ್ಷ ಇಂದ್ರಜಿತ್ ಸಿಂಗ್, ರಘುರಾಮ್, ಪರಿಮಳ, ಗಂಗಾಧರ್, ಗೋಪಾಲಕೃಷ್ಣ, ಮೌಸೀನಾ, ಅಶ್ವತ್ಥಪ್ಪ, ಬಾಬಾಜಾನ್, ಪೂರ್ಣಿಮಾ, ಅಶ್ವತ್ಥಮ್ಮ, ನಸ್ರೀನ್ ತಾಜ್, ಶಿಲ್ಪಾ, ಚೈತ್ರ, ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement