ಅನುಕಂಪ ಬೇಡ, ಅವಕಾಶ ನೀಡಿ
ಮುಳಬಾಗಲು: ಅಂಗವಿಕಲ ಮಕ್ಕಳಿಗೆ ಅನುಕಂಪದ ಬದಲಾಗಿ ಅವಕಾಶ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ದೇವರಾಜ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ತಾಲೂಕು ವಿಶ್ವ ಅಂಗವಿಕಲರ ದಿನಾಚರಣೆಯನ್ನು ಉದ್ಫಾಟಿಸಿ ಮಾತನಾಡಿ, ಸರ್ವಶಿಕ್ಷಣ ಅಭಿಯಾನದಲ್ಲಿ ಸರ್ಕಾರ ಅಂಗವಿಕಲ ಮಕ್ಕಳಿಗೆ ಹಲವಾರು ಯೋಜನೆ ರೂಪಿಸಿದೆ. ಅವನ್ನು ಸದುಪಯೋಗಪಡಿಸಿಕೊಳ್ಳಲು ಸೂಚಿಸಿದರು. ತಾಲೂಕಿನ ಎಲ್ಲ ಶಾಲೆಯ 4ರಿಂದ 8ನೇ ತರಗತಿಯ ಅಂಗವಿಕಲ ಮಕ್ಕಳು ಹಾಜರಿದ್ದರು.
ಅವರಿಗಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡಾಕೂಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೋಲಾರ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದ ಗಂಗಪ್ಪ, ಶಿಕ್ಷಕ ನಾರಾಯಣಸ್ವಾಮಿ ಮಾತನಾಡಿದರು. ಮುಖ್ಯಶಿಕ್ಷಕ ಎನ್.ವೆಂಕಟರವಣಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆ.ಚಂದ್ರ, ಶಿವಕುಮಾರ್, ಗಣೇಶ್, ಸುರೇಶ್, ಕುಶ, ಸುಬ್ರಮಣ್ಯರೆಡ್ಡಿ, ಮುನಿರಾಗಜ್, ಪ್ರಕಾಶ್ ಇದ್ದರು.