ಎಚ್ಚೆತ್ತುಕೊಂಡ ಆಡಳಿತ: ನಾಮಫಲಕ ಬದಲು
ಟೇಕಲ್: ಇತ್ತೀಚೆಗೆ ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ಮಾಲೂರು ತಾಲೂಕಿನಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರೆಂಬುದು ಹಲವಾರು ನಾಡ ಕಚೇರಿಗಳ ಮುಂಭಾಗದಲ್ಲಿರುವ ಫ್ಲೆಕ್ಸ್ಬೋರ್ಡ್ಗಳಲ್ಲಿ ಸಾರ್ವಜನಿಕರಲ್ಲಿ ಬಹುತೇಕ ಗೊಂದಲ ಮೂಡಿಸುತ್ತಿದೆ ಎಂಬುದು ಜನರಲ್ಲಿ ಬಂದಿರುವ ಗೊಂದಲದ ಗೂಡು ಎಂಬ ಸುದ್ದಿ ಪ್ರಕಟಿಸಲಾಗಿತ್ತು. ಇದರ ಫಲಶೃತಿಯಾಗಿ ತಾಲೂಕು ಆಡಳಿತ ಈ ಬಗ್ಗೆ ಕ್ರಮ ಕೈಗೊಂಡಿದ್ದು ಫ್ಲೆಕ್ಸ್ಗಳಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಎಂದೆ ಬಿಂಬಿಸಲಾಗಿತ್ತು. ಆದರೆ ಇದೀಗ ಅದನ್ನು ತೆಗೆದು ನಾಮಫಲಕಗಳನ್ನು ಖಾಲಿ ಮಾಡಲಾಗಿದೆ. ಇನ್ನೂ ಕೆಲವು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೀರಭಾಗ್ಯ ಯೋಜನೆಯ ನಾಮಫಲಕಗಳನ್ನು ಹಾಕಲಾಗಿದ್ದು ಸುದ್ದಿ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದೆ. ಟೇಕಲ್, ಮಾಸ್ತಿ, ಕೆ.ಜಿ. ಹಳ್ಳಿ, ಬನಹಳ್ಳಿ, ದಿನ್ನಹಳ್ಳಿ ಇನ್ನೂ ಮುಂತಾದ ಕಡೆ ರಾಜ್ಯ ಆಡಳಿತ ಪಕ್ಷದ ಬರಹಗಳನ್ನು ನಾಮಫಲಕಗಳಲ್ಲಿ ಹಾಕಲು ಯೋಜನೆ ರೂಪಿಸಿದೆ.