ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗುಂಪುಗಳ ನಡುವೆಮಾರಾಮಾರಿ

Rashmi Kasaragodu
Updated On : 4 Dec 2013, 12:59 pm

ಕೆಜಿಎಫ್: ಹಳೆ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಾರಾಮಾರಿ ಸಂಬಂಧ ನಗರಸಭೆ ಸದಸ್ಯ ಕೆ.ಸಿ. ಮುರಳಿ ಸೇರಿದಂತೆ ಇತರರ ವಿರುದ್ಧ ಚಾಂಪಿಯನ್ರೀಫ್ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿರುವ ಘಟನೆ ನಗರದಲ್ಲಿ ನಡೆದಿದೆ. ಚಾಂಪಿಯನ್ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯ ಎಫ್.ಬ್ಲಾಕ್ ಹಾಗೂ ಎಂ.ಬ್ಲಾಕ್ ನಿವಾಸಿಗಳ ಮಧ್ಯೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಜಗಳವಾಗಿದ್ದು ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಮತ್ತೆ ಎರಡು ಗುಂಪುಗಳ ಮಧ್ಯ ಮಾರಕಾಸ್ತ್ರಗಳಿಂದ ಹಲ್ಲೆ ಮತ್ತು ಮಾರಾಮಾರಿ ನಡೆದು ಪ್ರವೀಣ್ ಮತ್ತು ಸತೀಶ್ ಎಂಬುವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರವೀಣ್ ನೀಡಿದ ದೂರಿನ ಮೇರೆಗೆ ಹಲ್ಲೆ ನಡೆಸಿದ ಸತೀಶ್, ಭಾಸ್ಕರ್, ಲಕ್ಷ್ಮಣ್, ಶಿವ, ಗೌರಿ, ಪ್ರದೀಪ್, ದಿನೇಶ್, ಮತ್ತು ನವೀನ್ ಎಂಬುವರ ವಿರುದ್ಧ ದೂರು ದಾಖಲಾದರೆ ಸತೀಶ್ ನೀಡಿದ ದೂರಿನ ಮೇರೆಗೆ ಹಲ್ಲೆ ನಡೆಸಿದ ಪ್ರವೀಣ್, ಮಂಜು, ಅರುಣ್, ಸಿಲಂಬರಸನ್, ನಗರಸಭೆ ಸದಸ್ಯರಾದ ಕೆ.ಸಿ.ಮುರಳಿ, ವಿಜಯ್, ಜೋಸ್ಟ್, ತರುಣ್ ಮತ್ತು ಇತರೆ ಇಬ್ಬರ ವಿರುದ್ಧ ದೂರು ಪ್ರತಿ ದೂರನ್ನು ಚಾಂಪಿಯನ್ರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಾಲಕನ ಮೇಲೆ ಹಲ್ಲೆ
ಕೆಜಿಎಫ್: ನಗರಸಭೆ ಬಸ್ ನಿಲ್ದಾಣದಲ್ಲಿ ರಾಜ್ಯ ಸಾರಿಗೆ ಬಸ್ ಚಾಲಕನ ಮೇಲೆ ದುಷ್ಕರ್ಮಿಗಳಿಬ್ಬರು ಚಾಕುವಿನಿಂದ ಹಲ್ಲೆ ನಡೆಸಿದ್ದು ಬಸ್ ಚಾಲಕ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.  ಕೆಜಿಎಫ್ನ ನಗರಸಭೆ ಬಸ್ ನಿಲ್ದಾಣದಲ್ಲಿ ಬೆಂಗಳೂರು ಹೋಗುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೋರಡುವ ಸಮಯದಲ್ಲಿ ಬಸ್ ಮುಂಭಾಗ ನಿಂತಿದ್ದ ಸಂಜಯಗಾಂಧಿನಗರ ನಿವಾಸಿ ಶ್ರೀನಿವಾಸ್ ಮತ್ತು ಅಂಬೇಡ್ಕರ್ನಗರದ ನಿವಾಸಿ ಸುರೇಶ್ ಇಬ್ಬರು ದುಷ್ಕರ್ಮಿಗಳು ಬಸ್ಗೆ ಅಡ್ಡ ನಿಂತು ದಾರಿ ಬಿಡದ ಕಾರಣ ಬಸ್ ಚಾಲಕ ಮುನಿಸ್ವಾಮಿ ಹಾರನ್ ಹೊಡೆದರು. ಕುಪಿತಗೊಂಡ ದುಷ್ಕರ್ಮಿಗಳು ಅವರ ಬಳಿ ಇದ್ದ ಚಾಕುವಿನಿಂದ ಬಸ್ ಚಾಲಕ ಮುನಿಸ್ವಾಮಿಗೆ ತಿವಿಯಲು ಮುಂದಾದಾಗ ಚಾಲಕ ಪಕ್ಕಕ್ಕೆ ಸರಿದಿದ್ದರಿಂದ ಹೊಟ್ಟೆ ಮತ್ತು ಇತರೆ ಕಡೆ ಚಾಕು ತಾಗಿ ಗಾಯಗೊಂಡಿದ್ದಾರೆ.  ಕೂಡಲೇ ಬಸ್ ನಿಲ್ದಾಣದಲ್ಲಿದ್ದ ಸಾರಿಗೆ ಬಸ್ ಮತ್ತು ಖಾಸಗಿ ಬಸ್ ಚಾಲಕರು, ನಿರ್ವಾಹಕರು ಹಾಗೂ ಸಾರ್ವಜನಿಕರು ಧಾವಿಸಿ ಬಂದಿದ್ದು ಆರೋಪಿಗಳಾದ ಶ್ರೀನಿವಾಸ್ ಮತ್ತು ಸುರೇಶ್ ಅವರನ್ನು ಹಿಡಿದು ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಚಾಲಕ ಮುನಿಸ್ವಾಮಿಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆ ಆತ್ಮಹತ್ಯೆ
ಕೆಜಿಎಫ್: ಜೀವನದಲ್ಲಿ ಜಿಗುಪ್ಸೆಗೊಂಡು ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಂಡ್ರಸನ್ಪೇಟೆ ವ್ಯಾಪ್ತಿಯ ನಿವಾಸಿ ಸೆಲ್ವಕುಮಾರ್ ಎಂಬುವರ ಪತ್ನಿ ಸಿಂಧುಭೈರವಿ(22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸಿಂಧುಭೈರವಿ ಕಳೆದ ಒಂದು ವರ್ಷಗಳ ಹಿಂದೆ ಸೆಲ್ವಕುಮಾರ್ನೊಂದಿಗೆ ಮದುವೆ ಮಾಡಿಕೊಡಲಾಗಿದ್ದು ಗರ್ಭವತಿಯಾದ ಸಿಂಧುಭೈರವಿ ಹೆರಿಗೆಗೆಂದು ತಮ್ಮ ತವರು ಮನೆಗೆ ಹೋಗಿದ್ದರು. 20 ದಿನಗಳ ಹಿಂದೆಯಷ್ಟೆ ಗಂಡು ಮಗುವಿಗೆ ಜನ್ಮನೀಡಿದ್ದ ಸಿಂಧುಭೈರವಿಗೆ ಆಗಾಗ ಆರೋಗ್ಯದಲ್ಲಿ ಕೆಲ ಸಮಸ್ಯೆಗಳುಂಟಾಗುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿ ಸೆಲ್ವಕುಮಾರ್ ಪತ್ನಿಯೊಂದಿಗೆ ಇದ್ದು ಆಕೆಯ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದರು. ಸೋಮವಾರ ಸೆಲ್ವಕುಮಾರ್ ತಮ್ಮ ಮನೆಗೆ ಹೋಗಿ ನಾಳೆ ಬರುವುದಾಗಿ ಪತ್ನಿಯ ಬಳಿ ತಿಳಿಸಿ ಹೋಗಿದ್ದರು. ಸೋಮವಾರ ರಾತ್ರಿ ಮತ್ತೆ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದು ಇದರಿಂದ ಬೇಸತ್ತ ಸಿಂಧುಭೈರವಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾರಿಕುಪ್ಪಂ ಠಾಣಾ ಪೊಲೀಸರು ತಿಳಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿಲಾಗಿದ್ದು ಸ್ಥಳಕ್ಕೆ ಬಂಗಾರಪೇಟೆ ತಹಸೀಲ್ದಾರ್ ಉಷಾ ಅವರು ಭೇಟಿ ನೀಡಿ ಪರಿಶೀಲಿಸಿದರು. ಮಾರಿಕುಪ್ಪಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement