ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪತಿ ಕಿರುಕುಳ; ಪತ್ನಿ ಆತ್ಮಹತ್ಯೆ

Rashmi Kasaragodu
Updated On : 4 Dec 2013, 12:58 pm

ಮಾಲೂರು: ಗಂಡನ ಮಾನಸಿಕ ಹಿಂಸೆ ಸಹಿಸಲಾರದೆ ಗೃಹಿಣಿಯೊಬ್ಬಳು ನೇಣಿಗೆ ಶರಣಾದ ಘಟನೆ ತಾಲೂಕಿನ ಭಾವನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೃತಳನ್ನು ಮಾಲೂರು ಮೂಲದ ಶಶಿಕಲಾ(25)ಎಂದು ಗುರುತಿಸಲಾಗಿದೆ. ತನ್ನ ಎಡಗೈ ಮೇಲೆ ನನ್ನ ಸಾವಿಗೆ ನನ್ನ ಪತಿ ಮುನಿನರಸಪ್ಪ ಕಾರಣ. ನನಗೆ ಬರಬೇಕಾದ ಹಣವನ್ನು ಪಡೆದು ಮಗನನ್ನು ತವರು ಮನೆಯವರು ಬೆಳಸಲಿ ಎಂದು ಪೆನ್ನಿನಲ್ಲಿ ಬರೆದುಕೊಂಡಿದ್ದಾಳೆ.  ಆಕೆಯ ಪತಿ ಬಿಹಾರದ ಜಮಾಯಿಯಲ್ಲಿ ಸಿಆರ್ಪಿಎಫ್ನಲ್ಲಿದ್ದು, ಕಳೆದ ವಾರವಷ್ಟೆ ಕರ್ತವ್ಯಕ್ಕೆ ವಾಪಾಸ್ಸಾಗಿದ್ದ ಎನ್ನಲಾಗಿದೆ. ಮೃತೆ ಶಶಿಕಲಾ ತನ್ನ ಮೂರುವರೆ ವರ್ಷದ ಗಂಡು ಮಗುವನ್ನು ಮಾಲೂರಿನಲ್ಲಿರುವ ತನ್ನ ತಂದೆಯ ಮನೆಯಲ್ಲಿ ಬಿಟ್ಟಿದ್ದು, ಒಬ್ಬಂಟಿಯಾಗಿ ಗಂಡನ ಮನೆಯಲ್ಲಿ ವಾಸವಿದ್ದಳು ಎನ್ನಲಾಗಿದೆ.
ಅತ್ತೆ ಮನೆ ಪಕ್ಕದಲ್ಲಿದ್ದರೂ ಆಕೆಯ ಹಾಗೂ ಫೋನಿನ ಮೂಲಕ ಗಂಡನಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳು ಎನ್ನಲಾಗಿದೆ. ಡಿಇಡಿ ಮಾಡಿದ್ದ ಶಶಿಕಲಾ ಕುಡುಕ ಗಂಡನ ಹಿಂಸೆಯಿಂದ ಈಗಾಗಲೇ ಮೂರು ಬಾರಿ ಅತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಹೇಳುವ ಅಕೆಯ ತಂದೆ ಪಾಪಣ್ಣನವರು, ಹಣಕ್ಕಾಗಿ ನಿತ್ಯವೂ ಪೋನಿನ ಮೂಲಕ ಕಾಡುತ್ತಿದ್ದ ಮುನಿನರಸಪ್ಪ, ಹೆಂಡತಿ ಶಶಿಕಲಾಗೂ ಹಾಗೂ ಮಾವನಾದ ನನಗೂ ಕೆಟ್ಟ ಮಾತುಗಳನ್ನು ಆಡುತ್ತಿದ್ದ ಎನ್ನುತ್ತಾರೆ.
ಮದುವೆಯಾಗಿ ಕೇವಲ 6 ವರ್ಷದಲ್ಲೇ ಮಗಳ ಈ ಅತ್ಮಹತ್ಯೆಗೆ ಗಂಡ ಮುನಿನರಸಪ್ಪ ಹಾಗೂ ಅಕೆಯ ಅತ್ತೆ ಗೌರಮ್ಮ ಕಾರಣ ಎಂದು ಪಾಪಣ್ಣ ದೂರು ನೀಡಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement