ಬೈಕ್ಗೆ ಮಿನಿ ಲಾರಿ ಡಿಕ್ಕಿ: ಬೆಂಗಳೂರಿನ ಇಬ್ಬರು ಸಾವು
ಚಿಂತಾಮಣಿ: ದ್ವಿಚಕ್ರ ವಾಹನಕ್ಕೆ ಸರಕು ಸಾಗಣೆಯ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ತಳಗವಾರ ಗೇಟ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.
ಚಿಂತಾಮಣಿ ತಾಲೂಕಿನ ಬೆಂಗಳೂರು ಮಾರ್ಗದ ತಳಗವಾರ ದೊಡ್ಡ ಮೊರಿ ಬಳಿ ಸರಕು ಸಾಗಾಣಿಕೆಯ ಮಿನಿ ಲಾರಿ ಡಿಕ್ಕಿ ಹೊಡೆದಿದ್ದರಿಂದ ದ್ವಿಚಕ್ರ ವಾಹನದಲ್ಲಿ ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದ ಯಲಹಂಕ ನಿವಾಸಿಗಳಾದ ಕಿರಣ್ ಅಲಿಯಾಸ್ ಅರುಣ್ (22) ಮತ್ತು ಮಲ್ಲಿಕಾರ್ಜುನ (25) ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.