ಮತದಾರರ ಪಟ್ಟಿ ಪರಿಷ್ಕರಣೆ
ಮಾಲೂರು: ಚುನಾವಣಾ ಆಯೋಗದ ನಿರ್ದೇಶನದಂತೆ ಮಾಲೂರು ವಿಧಾನ ಸಭಾ ಕ್ಷೇತ್ರದ ಭಾವಚಿತ್ರವುಳ್ಳ ಮತದಾರರ ಪಟ್ಟಿಗಳ ಸಂಕ್ಷಿಪ್ತ ಪರಿಷ್ಕರಣೆ ಅರ್ಜಿಗಳನ್ನು ಸಲ್ಲಿಸುವುದನ್ನು ಈ ತಿಂಗಳ 6 ರ ವರೆಗೆ ವಿಸ್ತರಿಸಲಾಗಿದೆ ಎಂದು ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ತಿಳಿಸಿದ್ದಾರೆ.
ಸಂಬಂಧ ಪಟ್ಟ ಮತದಾರರು 6-12-13 ರೊಳಗೆ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡುವ ಅವಕಾಶವಿದ್ದು, ಮುಂದಿನ ವರ್ಷ ಜನವರಿಗೆ 18 ವರ್ಷ ತುಂಬಿದವರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಸರನ್ನು ಸೇರ್ಪೆಡೆ ಮಾಡಲು ನಮೂನೆ-6, ಹೆಸರು ತೆಗೆಯಲು ನಮೂನೆ-7, ಹೆಸರು ತಿದ್ದಪಡಿಯಾಗಬೇಕಾದಲ್ಲಿ ನಮೂನೆ-8, ಹೆಸರು ವರ್ಗಾವಣೆಯಾಗಬೇಕಾದಲ್ಲಿ ನಮೂನೆ-8ಎ ಗಳನ್ನು ನಿರ್ಧಿಷ್ಟಾಧಿಕಾರಿಗಳಿಂದ ನಿಗದಿತ ವೇಳೆಯಲ್ಲಿ ಪಡೆದು ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಸೂಕ್ತವಾದ ವಯಸ್ಸಿನ ಮತ್ತು ವಾಸದ ಬಗ್ಗೆ ದಾಖಲೆಗಳೂಂದಿಗೆ ನೀಡಬುಹುದಾಗಿದೆ ಎಂದು ತಹಸೀಲ್ದಾರ್ ಡಾ. ಸುಧಾ ಅವರು ತಿಳಿಸಿದ್ದಾರೆ.