ಇಂದು ಕಾರ್ಮಿಕ ಜಾಗೃತಿ ಶಿಬಿರ
ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಕನ್ನಡ ಮತ್ತು ಸಾಂಸ್ಕೃತಿಕ ಭವನದಲ್ಲಿ ಡಿ.5 ರಂದು ಬೆಳಗ್ಗೆ 11.30 ಕ್ಕೆ 2 ದಿನಗಳ ತಾಲೂಕು ಮಟ್ಟದ ಕಾರ್ಮಿಕ ಜಾಗೃತಿ ಶಿಬಿರ ಆಯೋಜಿಸಲಾಗಿದೆ. ಬೆಂಗಳೂರಿನ ಕೇಂದ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ,ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ ವತಿಯಿಂದ ನಡೆಯುತ್ತಿರುವ ಶಿಬಿರವನ್ನು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಉದ್ಘಾಟಿಸಲಿದ್ದು ದಕ್ಷಿಣ ವಲಯ ಪ್ರಾದೇಶಿಕ ನಿರ್ದೇಶಕ ನಿರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ವಿ. ರೆಡ್ಡಪ್ಪ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್. ಕವನ, ಡೆಪ್ಯೂಟಿ ತಹಶೀಲ್ದಾರ್ ಎಚ್.ಪಿ. ರಘುಪತಿ, ಶಿಕ್ಷಣಾಧಿಕಾರಿ ಹೆಚ್.ಎಂ.ಶಿವಬೋರಯ್ಯ, ಗ್ರಾ.ಪಂ.ಅಧ್ಯಕ್ಷ ಎಂ.ಪಿ.ಶ್ರೀರಂಗಪ್ಪ ಮುಂತಾದವರು ಭಾಗವಹಿಸುವರು. ಡಿ.6 ರಂದು ಮುಕ್ತಾಯ ಸಮಾರಂಭ ನಡೆಯಲಿದ್ದು ಜಿ.ಪಂ. ಸದಸ್ಯೆ ರಾಧಮ್ಮ ಗಂಗಾಧರ್, ತಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್, ಸಿಪಿಯುಸಿ ಪ್ರಾಂಶುಪಾಲ ಎಸ್. ನಂಜುಂಡ, ಶಿಕ್ಷಣಾಧಿಕಾರಿ ಹೆಚ್.ಎಂ. ಶಿವಬೋರಯ್ಯ, ಜಿ.ಪಂ. ಒಂಬಡ್ಸ್ಮನ್ ರಾಘವೇಂದ್ರರಾವ್, ಕೆ.ವಿ. ರೆಡ್ಡಪ್ಪ, ಎಂ.ಆರ್. ಜ್ಞಾನೇಶ್, ಆರ್.ಎನ್. ಬಾಲಕೃಷ್ಣ ಭಾಗವಹಿಸುವರು.