ಗ್ರಾಮೀಣಾಭಿವೃದ್ಧಿಯಲ್ಲಿ ಜಿಲ್ಲೆಗೆ 3ನೇ ಸ್ಥಾನ
ಕೋಲಾರ: ಗ್ರಾಮೀಣಾಭಿವೃದ್ಧಿಯಲ್ಲಿ ಕೋಲಾರ ಜಿಲ್ಲೆಗೆ ಮೂರನೇ ಸ್ಥಾನ ಲಭಿಸಿದೆ. ಕಳೆದ ಸೆಪ್ಟೆಂಬರ್ 2013ನೇ ಸಾಲಿನ ಅಂತ್ಯಕ್ಕೆ ಸಾಧಿಸಿರುವ ಪ್ರಗತಿಯಲ್ಲಿ ಬೆಳಗಾವಿ ಮತ್ತು ದಾವಣಗೆರೆ ಶೇಕಡ 80ಕ್ಕಿಂತ ಹೆಚ್ಚು ಸಾಧನೆ ಮಾಡಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದಿದ್ದರೆ, ಕೋಲಾರ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮಂಡ್ಯ, ಬಳ್ಳಾರಿ, ಗುಲ್ಬರ್ಗ, ಉತ್ತರ ಕನ್ನಡ ಜಿಲ್ಲೆಗಳು ಶೇ. 55ಕ್ಕಿಂತ ಕಡಿಮೆ ಸಾಧನೆ ಮಾಡಿದ್ದು ಪ್ರಗತಿ ಕಾಣುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸೂಚಿಸಿದ್ದಾರೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 425 ಲಕ್ಷ ರು.ಗಳನ್ನು ವಿನಿಯೋಗ ಮಾಡಿ ಶೇ.100 ರಷ್ಟು ಹಾಗೂ ಇನ್ನಿತರ ಯೋಜನೆಯಡಿ 25.99 ಕೋಟಿ ರುಗಳ ಪೈಕಿ 21.68 ಕೋಟಿ ರು. ಖರ್ಚು ಮಾಡಿ ಶೇ.83 ಸಾಧನೆ ಮಾಡಿದ್ದು ಇದಕ್ಕಾಗಿ ಜಿಲ್ಲೆಗೆ 3ನೇ ಸ್ಥಾನ ಲಭಿಸಿರುವುದಲ್ಲದೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಪ್ರಶಂಸೆ ಸಿಕ್ಕಿದೆ ಎಂದು ಕೋಲಾರ ಜಿಪಂ ಸಿಇಓ ಝುಲ್ಫಿಖಾರ್ ಉಲ್ಲಾ ತಿಳಿಸಿದ್ದಾರೆ.