ಜ್ಯೋತಿಬಾ ಪುಲೆ ಪರಿನಿರ್ವಾಣ ದಿನಾಚರಣೆ
ಗೌರಿಬಿದನೂರು: ಮಹಾತ್ಮ ಜ್ಯೋತಿ ಬಾಪುಲೆ ಅವರು ಸಮಾನತೆಯ ಹರಿಕಾರ ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಸತ್ಯನಾರಾಯಣ ತಿಳಿಸಿದರು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗೌತಮಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾ ಬಳಗ ಟ್ರಸ್ಟ್ ಹಮ್ಮಿಕೊಂಡಿದ್ದ ಜ್ಯೋತಿ ಬಾಪುಲೆ ಅವರ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ನುಡಿ ನಮನ ಅರ್ಪಿಸಿ ಮಾತನಾಡಿದರು. ವಕೀಲ ಬಿ.ಕೆ. ನರಸಿಂಹಮೂರ್ತಿ, ಎಸ್ಎಸ್ಡಿ ತಾಲೂಕು ಅಧ್ಯಕ್ಷ ಸುಬ್ರಮಣಿ, ನಾರಾಯಣಪ್ಪ, ಬಿಎಸ್ಪಿ ಬಾಲಕೃಷ್ಣ, ಶಿಕ್ಷಕ ಓಬಲೇಶ್, ಪ್ರದೀಪ್, ವಕೀಲ ಶಿವಣ್ಣ ಇದ್ದರು. ಗೌತಮಬುದ್ಧ ಬಳಗದ ಉಪಾಧ್ಯಕ್ಷ ಕದಿರಯ್ಯ, ಚಂದ್ರಬಾಬು, ಕ್ರಾಂತಿಗೀತೆಗಳು ಹಾಡಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ಸಂಘದ ಅಧ್ಯಕ್ಷ ಇಡಗೂರು ವೈ.ಟಿ. ಪ್ರಸನ್ನ ಕುಮಾರ್ ನಡೆಸಿಕೊಟ್ಟರು.