ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ

Rashmi Kasaragodu
Updated On : 5 Dec 2013, 1:21 am

ಮಾಲೂರು: ಸರ್ಕಾರಿ ನೌಕರರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ಹೇಳಿದರು. ಪಟ್ಟಣದ ಜೆಎಸ್ಎಸ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಪಹಣಿಯಲ್ಲಿ ಬೆಳೆ ದಾಖಲಾತಿ ಹಾಗೂ ಬೆಳೆ ಕಟಾವು ಪ್ರಯೋಗಗಳ ಅವಶ್ಯಕತೆ ಕುರಿತು ಇಲಾಖೆ ಅಧಿಕಾರಿಗಳಿಗಾಗಿ ಎರಡು ದಿನದ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿ,  ಕೃಷಿ ಪ್ರಧಾನ ದೇಶವಾದ ನಮ್ಮಲ್ಲಿ ಕೃಷಿ ಅಭಿವೃದ್ಧಿಯಾಗಲು ನಿಖರ ಅಂಕಿ ಅಂಶಗಳ ಸಂಗ್ರಹಣೆ ಅಗತ್ಯ. ಕೃಷಿವಲಯದ ಆದಾಯ ರಾಜ್ಯದ ನೀತಿ ನಿರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆಯಬೇಕು ಎಂದರು. ಜಿಲ್ಲಾ ಸಂಖ್ಯೆ ಸಂಗ್ರಹಣಾಧಿಕಾರಿ ವಿ. ಂಕರನಾರಾಯಣ್ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳು ಕ್ಷೇತ್ರ ಭೇಟಿ ಆಧಾರದ ಮೇಲೆ ಸಂಪೂರ್ಣ ಬೆಳೆ ಕ್ಷೇತ್ರ ಎಣಿಕೆ ಮಾಡಿ ಪಹಣಿ ಪತ್ರಿಕೆಯಲ್ಲಿ ದಾಖಲಿಸಿದ ವಿವಿರಗಳೇ ರಾಜ್ಯದ ಬೆಳೆ ಕ್ಷೇತ್ರ ಅಂದಾಜಿನ ಮಾಹಿತಿಯ ಮೂಲವಾಗಿತ್ತಿದ್ದು,ಅಧಿಕಾರಿಗಳು ಪ್ರತಿಯೊಂದು ಸರ್ವೆ ಮತ್ತು ಸಬ್ ಸರ್ವೆ ನಂಬರ್ವಾರು ಎಲ್ಲ ಋತುಗಳಲ್ಲಿ ಬೆಳೆ ಕ್ಷೇತ್ರಕ್ಕೆ ಭೀಟಿ ನೀಡಿ ಮಾಹಿತಿ ಸಂಗ್ರಹಿಸಿ ಪಹಣಿಯಲ್ಲಿ ದಾಖಲಿಸಬೇಕು ಎಂದರು. ತಾಲೂಕು ಕೃಷಿ ಅಧಿಕಾರಿ ಭವ್ಯರಾಣಿ, ತೋಟಾಗಾರಿಕೆ ಅಧಿಕಾರಿ ಆನಂದ್, ಜಿಲ್ಲಾ ಸಂಖ್ಯಿಕಾಧಿಕಾರಿ ಪ್ರಸಾದ್, ಮಹಮದ್ ಗುಲಾಮ್ ಹುಸೇನ್, ಕಂದಾಯ ಅಧಿಕಾರಿ ನಾರಾಯಣಸ್ವಾಮಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement