ಪಿಎಸ್ಐ ನರಸಿಂಹಮೂರ್ತಿ ಈಗ ಠಾಣಾಧಿಕಾರಿ
ಕೆಜಿಎಫ್: ಕೇಂದ್ರ ವಲಯ ಐಜಿಪಿ ಅಮರ್ಕುಮಾರ್ ಪಾಂಡೆ ಅವರ ಆದೇಶದ ಮೇರೆಗೆ ಕೆಜಿಎಫ್ನ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾಯಲ್ಲಿ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ನರಸಿಂಹಮೂರ್ತಿ ಅವರನ್ನು ಠಾಣಾ ಅಧಿಕಾರಿಯಾಗಿ ನೇಮಿಸಿ ಆಂತರಿಕ ಬದಲಾವಣೆ ಮಾಡಲಾಗಿದೆ ಎಂದು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿಕಟೋಚ್ ಸೆಫಟ್ ಆದೇಶ ಹೊರಡಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಪಿಎಸ್ಐಗಳು ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಪೈಕಿ ಸೇವಾವಧಿಯಲ್ಲಿ ಹಿರಿಯ ಪಿಎಸ್ಐ ಅಧಿಕಾರಿಗೆ ಠಾಣಾ ಅಧಿಕಾರಿಯಾಗಿ ನೇಮಿಸಬೇಕು ಎಂದು ಉಚ್ಚನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದ ಹಿನ್ನಲೆಯಲ್ಲಿ ನ್ಯಾಯಾಲಯ ಈ ರೀತಿ ತೀರ್ಪು ನೀಡಿ 6 ತಿಂಗಳಾಗಿತ್ತು. ಆದರೆ ಇದನ್ನು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರದ ಕಾರಣ ವಿಧಾನಸಭಾ ಕಲಾಪದಲ್ಲಿ ಈ ಬಗ್ಗೆ ಪ್ರಶ್ನೆ ಮಂಡನೆ ಮಾಡಿರುವ ಹಿನ್ನಲೆಯಲ್ಲಿ ಈ ಮೊದಲೇ ಕೇಂದ್ರ ವಲಯ ಐಜಿಪಿ ಆದೇಶದ ಮೇರೆಗೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಇಲಾಖೆಯ ಮೂಲದಿಂದ ತಿಳಿದುಬಂದಿದೆ