ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಸ್ಸಿಂದ ತಲೆ ಹೊರ ಹಾಕಿದ ಬಾಲಕಿಗೆ ಗಂಭೀರ ಗಾಯ

Rashmi Kasaragodu
Updated On : 5 Dec 2013, 1:16 am

ಟೇಕಲ್: ಶಾಲಾ ಬಾಲಕಿಯೊಬ್ಬಳು ಬಸ್ ಕಿಟಕಿಯಿಂದ ತಲೆ ಇಟ್ಟ ಪರಿಣಾಮ ಮುಂದೆ ಬರುತ್ತಿದ್ದ ಬಸ್ಸಿಗೆ ತಲೆ ಬಡಿದು ತೀವ್ರತರವಾದ ಗಾಯವಾದ ಘಟನೆ ಇಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ನಡೆದಿದ್ದೇನು: ಕೊಮ್ಮನಹಳ್ಳಿ ನಿವಾಸಿ ನಾರಾಯಸ್ವಾಮಿಯ ಮಗಳು ಕಸ್ತೂರಿ 6 ವರ್ಷದ ಪುಟ್ಟ ಬಾಲಕಿ ಪಟಾಲಮ್ಮ ಕ್ರಾಸ್ ಬಳಿ ಇರುವ ಸ್ವಾಮಿ ವಿವೇಕಾನಂದ ಶಾಲೆಗೆ ಹೋಗಲು ಕೋಲಾರ-ತೊರಲಕ್ಕಿ ಓಡಾಡುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸಿನಲ್ಲಿ ಹತ್ತಿ ಕುಳಿತಿದ್ದು ಈ ಸಂದರ್ಭದಲ್ಲಿ ಬಸ್ಸಿನಲ್ಲಿಯೇ ಊಟದ ಡಬ್ಬಿ ತೆಗೆದು ಊಟ ಮಾಡುತ್ತಿದ್ದು ಮಾರ್ಗಮಧ್ಯೆ ಟೇಕಲ್ ಸರ್ಕಲ್ ಬಳಿ ತಿರುವಿನಲ್ಲಿ ಬಾಲಕಿ ತಿಂಡಿ ಮುಗಿಸಿ ಕೈತೊಳೆಯಲು ತಲೆ ಕಿಟಕಿಯಿಂದ ಆಚೆ ಇಟ್ಟ ಸಂದರ್ಭದಲ್ಲಿ ಆಕಸ್ಮಿಕ ಮಾಸ್ತಿಗೆ ಹೊರಡಲು ನಿಂತಿದ್ದ ಕೆ.ಜಿ.ಎಫ್. ಡಿಪೋನ ಕೆ.ಎಸ್.ಆರ್.ಟಿ.ಸಿ. ಬಸ್ಗೆ ಇವರ ಬಸ್ ಅಂಚಿನಲ್ಲಿ ಬಸ್ಸಿಗೆ ತಾಗಿ ಕಸ್ತೂರಿಯ ತಲೆಗೆ ತೀವ್ರವಾದ ಗಾಯವಾಯಿತು.
ತಕ್ಷಣಕ್ಕೆ ಸ್ಥಳೀಯ ಟೇಕಲ್ ಆಸ್ಪತ್ರೆಗೆ ದಾಖಲಿಸಿ ನಂತರ ಕೋಲಾರದ ದೇವರಾಜ್ ಅರಸು ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದು ಬಾಲಕಿಯನ್ನು ತೀವ್ರ ನೀಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಟೇಕಲ್ ಹೊರಠಾಣೆ ಪೊಲೀಸರು ಈ ಬಗ್ಗೆ ಕೇಸು ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.
ಒಟ್ಟಾರೆ ಚಾಲಕರ ಅಜಾಗೂರಕತೆಯೋ, ರಸ್ತೆ ಕಿರಿದಾಗಿರುವುದೋ, ಹಾಗೂ ಮಗುವಿನ ಸಮಯ ಪ್ರಜ್ಞೆಯೋ ನಿಜಕ್ಕೂ ಪುಟ್ಟ ಬಾಲಕಿಗೆ ತಲೆಗೆ ತೀವ್ರ ಗಾಯವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement