ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರ್ತೂರು ಕೆರೆ ನೀರು; ಗೊಂದಲ ಬೇಡ

Rashmi Kasaragodu
Updated On : 5 Dec 2013, 1:21 am

ಮಾಲೂರು: ವರ್ತೂರು ಕೆರೆ ನೀರನ್ನು ಶುದ್ಧೀಕರಿಸಿ ಮಾಲೂರು ತಾಲೂಕಿನ ಕೆರೆಗಳಿಗೆ ಹರಿಸುವುದರಿಂದ  ವಿಷಯುಕ್ತ ನೀರು ಹರಿದು ಬರಲಿದೆ ಎಂಬ ಗೂಂದಲ ತಾಲೂಕಿನ ಜನತೆಯಲ್ಲಿ ಬೇಡ ಎಂದು ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಹೇಳಿದರು.
ವರ್ತೂರು ಕೆರೆ ನೀರನ್ನು ಶುದ್ಧೀಕರಿಸಿ ತಾಲೂಕಿನ ಕೆರೆಗಳಿಗೆ ಹರಿಸುವ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕೆಂದು ಪಟ್ಟಣದಿಂದ ಬೆಂಗಳೂರಿನ ವಿಧಾನ ಸೌಧದವರಗೆ ಹೋಗಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದವರಿಗೆ ಉಡುಗೂರೆಯಾಗಿ ವಿಐಪಿ ಸೂಟ್ಕೇಸ್ ವಿತರಿಸಿ ಮಾತನಾಡಿ, ರಾಜ್ಯ ಸರ್ಕಾರ ಈ ಯೋಜನೆ ಅನುಷ್ಠಾನಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಎಂದರು.
ಒಂದು ವೇಳೆ ವರ್ತೂರು ಕರೆ ನೀರು ವಿಷಯುಕ್ತವಾಗಿದ್ದರೆ ವರ್ತೂರು ನಿಂದ ಹರಿದು ಹೋಗುವ ತಮಿಳುನಾಡಿನ ವರೆಗೂ ಇದೇ ನೀರನ್ನು ಕೃಷಿಗೆ ಬಳಸಲು ಹೇಗೆ ಸಾಧ್ಯ, ವರ್ತೂರು ಕೆರೆ ಪಕ್ಕದಲ್ಲೇ ಕೊರೆಸಲಾದ ಕೊಳವೆ ಬಾವಿಯಲ್ಲಿ ಸಿಹಿ ನೀರು ಸಿಗುತ್ತಿರುವಾಗ ವರ್ತೂರು ಕೆರೆ ನೀರು ವಿಷಯುಕ್ತ ಎನ್ನುವ ಅಪಾದನೆಯಲ್ಲಿ ಹುರಳಿಲ್ಲ ಎಂದರು. ಇದೇ ಸಂಧರ್ಭದಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ 400 ಜನರಿಗೆ ಮಾಜಿ ಶಾಸಕರು ವಿಐಪಿ ಸೂಟ್ಕೇಸ್ ವಿತರಿಸಿದರು. ಜಿಪಂ ಸದಸ್ಯರಾದ ರಾಮಸ್ವಾಮಿ ರೆಡ್ಡಿ, ಯಲ್ಲಮ್ಮ, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಲೋಕೇಶ್, ಕೃಷ್ಣಪ್ಪ, ಪಾರ್ವತಮ್ಮ, ರಾಜಪ್ಪ, ಪುರಸಭೆ ಸದಸ್ಯ ಗೀತಾ ವೆಂಕಟೇಶ್, ರವೀಂದ್ರ ರೆಡ್ಡಿ, ಅಶ್ವಥ್ ರೆಡ್ಡಿ, ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement