ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಚೆ ಪೇದೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

Mainashree
Updated On : 6 Dec 2013, 12:26 pm

ಕ.ಪ್ರ.ವಾರ್ತೆ ಮಾಲೂರು  ಡಿ. 5
ಅಂಚೆ ಪತ್ರಗಳನ್ನು ನಿಧಾನವಾಗಿ ತಲುಪಿಸುವ ಜತೆಯಲ್ಲಿ ಪಿಂಚಣಿ ಹಣ ವಿತರಿಸುವಾಗ ಪಿಂಚಣಿದಾರರನ್ನು ಶೋಷಣೆ ಮಾಡುತ್ತಿರುವ ಪೋಸ್ಟ್‌ಮೆನ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಅಂಚೆ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ರಾಮಕೃಷ್ಣಪ್ಪ, ತಾಲೂಕಿನ ಹೋಬಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಚೆ ಪೇದೆಗಳು ವಿಧವಾ ಹಾಗೂ ವೃದ್ಧಾಪ್ಯ ಪಿಂಚಣಿ ವಿತರಿಸುವಾಗ ಸತಾಯಿಸುವುದಲ್ಲದೇ 50ಗಳನ್ನು ಹಿಡಿದು ಪಿಂಚಣಿ ಹಣ ನೀಡುತ್ತಿದ್ದಾರೆ. ಪಿಂಚಣಿ ಹಣ ನಂಬಿಕೊಂಡಿರುವ ಅಸಹಾಯಕರು ಅಂಚೆ ಪೇದೆಗಳ ಶೋಷಣೆ ತಡೆದುಕೊಳ್ಳಲು ಕಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಗ್ರಾಮಾಂತರ ಪ್ರದೇಶಗಳಿಗೆ ಅಂಚೆ ಪತ್ರಗಳನ್ನು ವಿಳಂಬವಾಗಿ ತಲುಪಿಸುತ್ತಿರುವ ಅಂಚೆ ಪೇದೆಗಳು ಒಮ್ಮೊಮ್ಮೆ ಮೊಬೈಲ್ ಮೂಲಕ ತಮ್ಮ ಸ್ಥಳಕ್ಕೆ ಕೆರೆಸಿಕೊಂಡು ಪತ್ರ-ಪಿಂಚಣಿ ವಿತರಿಸುತ್ತಿದ್ದಾರೆ ಎಂದು ದೂರಿದರು. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಪಿಂಚಣಿದಾರರನ್ನು ಶೋಷಿಸುತ್ತಿರುವ ಪೋಸ್ಟ್ ಮೆನ್‌ಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಕಲಾವಿದ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂಬೆ ರಾಜೇಶ್, ಜಿಲ್ಲಾ ಉಪಾಧ್ಯಕ್ಷ ಟೇಕಲ್ ಶ್ರೀರಾಮುಲು, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಪ್ರಕಾಶ್, ಕೊಪ್ಪ ಚಂದ್ರು, ದಯಾನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement