ಕನ್ನಡ ಸಾಹಿತ್ಯಕ್ಕೆ ಜಿಲ್ಲೆ ಕೊಡುಗೆ ಅಪಾರ
ಕೆಜಿಎಫ್: ಕೋಲಾರ ಜಿಲ್ಲೆಯ ಚಿನ್ನದ ನಾಡಿನಲ್ಲಿ ಜನಿಸಿದ ಡಿ.ವಿ. ಗುಂಡಪ್ಪ, ಸರ್.ಎಂ. ವಿಶ್ವೇಶ್ವರಯ್ಯ, ಮಾಸ್ತಿ ವೆಂಕಟೇಶ್ ಅಯಂಗಾರ್ ಸೇರಿದಂತೆ ಅನೇಕ ಮಹನೀಯರು ನೀಡಿದ ಕೊಡುಗೆ ಎಂದು ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಮುದ್ದು ತೀರ್ಥಹಳ್ಳಿ ಹೇಳಿದರು. ನಾಡಿನಾದ್ಯಂತ ಇಂತಹ ಸಮ್ಮೇಳನಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆಯೋಜಿಸುವ ಮೂಲಕ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಗಡಿ ಪ್ರದೇಶದಲ್ಲಿ ಕನ್ನಡ ಕಂಪನ್ನು ಮೂಡಿಸಲು ಹೆಚ್ಚು ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಚಿನ್ನದ ಗಡಿ ಪ್ರದೇಶದಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಇದರ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕಿದೆ. ಮಕ್ಕಳಲ್ಲಿ ಕಲ್ಪನಾಶಕ್ತಿ, ಸೃಜನಶೀಲತೆ ಹೆಚ್ಚಿಸಬೇಕಿದೆ ಮಕ್ಕಳ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಘಗಳು ಹೆಚ್ಚು ಕೆಲಸಮಾಡಬೇಕಿದೆ ಎಂದರು.
ಶಾಲಾ ಮಕ್ಕಳಲ್ಲಿ ಅತ್ಯುತ್ತಮ ಜ್ಞಾನ ಶಕ್ತಿ ಮತ್ತು ಪ್ರತಿಭೆಯಿರುವುದನ್ನು ಆಯಾ ಶಾಲಾ ಶಿಕ್ಷಕರು ಮತ್ತು ಮಕ್ಕಳ ತಂದೆ ತಾಯಂದಿರು ಅರಿತು ಅವರ ಪ್ರತಿಭೆಯನ್ನು ಲೋಕಕ್ಕೆ ತಿಳಿಸಲು ಮುಂದಾಗಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಸಮಾನತೆ ಭಾವ ಮೂಡಿಸಿ ಕನ್ನಡದ ಬಗ್ಗೆ ಮತ್ತು ಕನ್ನಡದ ಸಂಸ್ಕೃತಿಯ ಬಗ್ಗೆ ತಿಳಿಸಬೇಕು ಎಂದು ಹೇಳಿದರು. ಶಾಲೆಯಲ್ಲಿ ಮಕ್ಕಳು ಶಿಕ್ಷಕರನ್ನು ಅಡ್ಡ ಹೆಸರಿಟ್ಟು ಕರೆಯುವುದು ಮತ್ತು ಶಾಲಾ ಆವರಣದಲ್ಲಿ ಕಟು ಭಾಷೆ ಉಪಯೋಗಿಸುವುದು ಮಾಡುತ್ತಿದ್ದಾರೆ. ಇದು ಇತ್ತಿಚೆಗೆ ಬಿಡುಗಡೆಯಾಗುತ್ತಿರುವ ಕನ್ನಡ ಚಲನಚಿತ್ರಗಳಿಂದ ಮಾತ್ರವೇ ಎಂದರು.
ಇದೇ ವೇಳೆ ಮಾತನಾಡಿದ ಮಕ್ಕಳ ಸಾಹಿತಿಗಳು ಹಾಗೂ ಕೇಂದ್ರ ಸಾಹಿತಿ ಅಕಾಡೆಮಿ ಪುರಸ್ಕೃತರಾದ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಮಕ್ಕಳಿಗೆ ದೊಡ್ಡವರಲ್ಲಿರುವ ಅಗತ್ಯೆಗಳಿರುವುದಿಲ್ಲ ಅವರಿಗೆ ಬೇಕಾದ ಪ್ರಪಂಚ ಅವರಿಗೆ ಇಷ್ಟವಾದ ಜೀವನ ಮಕ್ಕಳ ಬೇಡಿಕೆಗಳನ್ನು ಅರಿತುಕೊಂಡು ಪೋಷಕರು ಕೆಲಸಮಾಡಬೇಕಿದೆ ಎಂದರು. ಪೋಷಕರು ಮಕ್ಕಳನ್ನು ಎಂಜಿನಿಯರ್, ಡಾಕ್ಟರ್ ಮಾಡುವುದಾಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುವ ಮೂಲಕ ಹೊರದೇಶದ ಎಬಿಸಿಡಿಯನ್ನು ಕಲಿಸಿ ಮಕ್ಕಳ ನಾಲಿಗೆಯಿಂದ ಅಆಇಈಯನ್ನು ಕಿತ್ತುಹಾಕಲು ಹೋರಟ್ಟಿದ್ದಾರೆ. ಭಾಷಾ ಪ್ರೇಮವನ್ನು ಮಕ್ಕಳಿಗೆ ನೀಡುವ ಪರಿಜ್ಞಾನ ಕೆಲ ಪೋಷಕರಿಗಿಲ್ಲ. ಅದೇ ರೀತಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಮಕ್ಕಳು ಅವರ ಮಾತೃಭಾಷೆಯನ್ನಾಡಿದರೆ ಅವರನ್ನು ಶಿಕ್ಷಿಸಿ ದಂಡ ಕಟ್ಟಿಸಿಕೊಳ್ಳುತ್ತಿರುವ ಶಿಕ್ಷಕರ ಧೋರಣೆಯನ್ನು ಖಂಡಿಸಿದರು.
ತಾವು ಬರೆದ ಮಕ್ಕಳ ಚಿನ್ನರಜೋಗಿ ಚಲನಚಿತ್ರಕ್ಕೆ ಕವಿತಾ ರೂಪದಲ್ಲಿ ಹಾಡುಗಳನ್ನು ಸಂಸ್ಕೃತಿ ಎಲ್ಲರಿಗೆ ಮೆಚ್ಚುವ ಕೆಲಸಮಾಡಿದೆ ಆದರೆ ಇತ್ತೀಚೆಗೆ ಬರುತ್ತಿರುವ ಕಳಪೆ ಚಿತ್ರಗಳನ್ನು ನೋಡಲು ಪೋಷಕರು ಮಕ್ಕಳೊಂದಿಗೆ ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ. ಮೊದಲು ಹೆತ್ತವರು ಅವರ ಬೇಕು ಬೇಡಗಳನ್ನು ಮತ್ತು ಅವರ ಜೀವನದ ಕನಸು ಏನು ಎಂಬುದನ್ನು ಅರಿತುಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.