ಜೀವನದಲ್ಲಿ ಜಿಗುಪ್ಸೆ: ವ್ಯಕ್ತಿ ಆತ್ಮಹತ್ಯೆ
ಟೇಕಲ್: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ಟೇಕಲ್ ಸಮೀಪದ ಸೋಮಸಂದ್ರದ ಬಳಿ ಗುರುವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ವೆಂಕಟೇಶಪ್ಪ (40) ಕೋಲಾರ ತಾಲೂಕಿನ ಕಂಚುಗಾರನಹಳ್ಳಿಯ ನಿವಾಸಿಯೆಂದು ತಿಳಿದು ಬಂದಿದ್ದು, ಟೇಕಲ್ ಸಮೀಪದ ಬಂಗಾರಪೇಟೆ ರಸ್ತೆಯ ಸೋಮಸಂದ್ರ ಗ್ರಾಮದ ದಾರಿಯಲ್ಲಿ ಮರಕ್ಕೆ ಆತನ ಅಂಗಿಯಲ್ಲೆ ನೇಣು ಬಿಗಿದು ಕೊಂಡಿದ್ದು, ಸ್ಥಳಕ್ಕೆ ಮಾಸ್ತಿ ಪಿಎಸ್‌ಐ ಸಿದ್ದಪ್ಪ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.