ತಪ್ಪೊಪ್ಪಿಕೊಂಡ ಮಂತ್ರವಾದಿ ಭಾಷಾ
ಚಿಂತಾಮಣಿ: ನಿಧಿ ಆಸೆಗಾಗಿ ಬಾಲಕಿಯನ್ನು ಬಲಿ ಕೊಡಲು ಮುಂದಾಗಿರುವುದು ನಿಜ ಎಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿ ಬಾಷಾ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
ತಾಲೂಕಿನ ಯರ್ರಯ್ಯಗಾರಹಳ್ಳಿ ಗ್ರಾಮದ ಹೊರವಲಯದ ಹುತ್ತದಲ್ಲಿ ನಿಧಿ ಎಂದು, ಜನಾರ್ದನ್ ಎಂಬವರ ಮಗಳನ್ನು ಬಲಿ ಕೊಡಲು ಸಿದ್ಧತೆ ನಡೆಸಿ ವಿಫಲಗೊಂಡ ಘಟನೆ ತಾಲೂಕಿನ ಜನರಲ್ಲಿ ಆತಂಕ ಮೂಡಿಸಿದೆ. ನಿಧಿ ಪಡೆಯಲು ಅಮಾವಸ್ಯೆ ದಿನ ಹುಟ್ಟಿದ ಬಾಲಕಿಯನ್ನು ಅಮಾವಸ್ಯೆ ದಿನದಂದೆ ಕ್ಷುದ್ರ ದೇವತೆಗೆ ಬಲಿ ನೀಡಿದಲ್ಲಿ ಸಾಧ್ಯ ಎಂಬ ಆಸೆಯಿಂದ ಈ ಕೃತ್ಯಕ್ಕೆ ಮುಂದಾಗಿರುವುದಾಗಿ ತಿಳಿದು ಬಂದಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸದಿರುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.