ನೀರುಗಂಟಿ ಬದಲಿಸುವಂತೆ ಆಗ್ರಹ
ಮಾಲೂರು: ನೀರು ವಿತರಣೆಯಲ್ಲಿ ತಾರತಮ್ಯ ಹಾಗೂ ನಿರ್ಲಕ್ಷ್ಯ ತೋರುತ್ತಿರುವ ಪುರಸಭೆ ನೀರುಗಂಟಿ ಮಣಿಯನ್ನು ಬದಲಾಯಿಸಬೇಕೆಂದು ಆಗ್ರಹಿಸಿ ಪಟ್ಟಣದ 12ನೇ ವಾರ್ಡ್ನ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು. ವಾರ್ಡ್ ಮುಖಂಡರಾದ ಕುಟ್ಟಿ ಮುನಿರಾಜು ಹಾಗೂ ಗೋಪಾಲ್ ಮಾತನಾಡಿ, ವಾರ್ಡ್ನಲ್ಲಿ ವಿತರಣೆಗೆ ಯಥೇಚ್ಛ ನೀರಿನ ಸಂಗ್ರಹವಿದ್ದರೂ ನೀರುಗಂಟಿ ಮಣಿ ತನ್ನ ಕರ್ತವ್ಯ ಲೋಪದಿಂದ ಕೃತಕ ನೀರಿನ ಅಭಾವ ಸೃಷ್ಟಿ ಮಾಡುತ್ತಿದ್ದಾನೆ. ಈ ಬಗ್ಗೆ ವಿಚಾರಿಸಿದರೆ ಅಸಡ್ಡೆ ತೋರುವುದಲ್ಲದೇ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾನೆ. ಈ ತಕ್ಷಣ ನೀರುಗಂಟಿಯನ್ನು ಬೇರೆ ವಾರ್ಡ್ಗೆ ಬದಲಾಯಿಸಿ ವಾರ್ಡ್ ನಿವಾಸಿಗಳನ್ನು ಸ್ವಂದಿಸುವ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ವಾರ್ಡ್ನಲ್ಲಿನ ನೀರಿನ ವಿತರಣೆಯ ವಾಸ್ತವ ಅರಿಯುವುದಾಗಿ ತಿಳಿಸಿದರು. ನೀರುಗಂಟಿಯನ್ನು ಬೇರೆ ವಾರ್ಡ್ಗೆ ಬದಲಾಯಿಸುವುದಾಗಿ ಭರವಸೆ ನೀಡಿದರು.