ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪದಾಧಿಕಾರಿಗಳ ಆಯ್ಕೆ ಅನೂರ್ಜಿತ

Mainashree
Updated On : 6 Dec 2013, 12:25 pm

ಮಾಲೂರು: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಅ.28 ರಂದು ನಡೆದಿರುವ ಸಭೆ ಅಸಿಂಧುವಾಗಿದ್ದು, ಸಭೆಯಲ್ಲಿ ನಡೆದಿರುವ ಪದಾಧಿಕಾರಿಗಳ ಆಯ್ಕೆ ಊರ್ಜಿತವಾಗುವುದಿಲ್ಲ ಎಂದು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟಶಿವಪ್ಪ ತಿಳಿಸಿದ್ದಾರೆ.
ಜಿಲ್ಲಾ ಸಂಘ ಈವರೆಗೂ ತಾಲೂಕು ಸಂಘದ ಯಾವುದೇ ಆಯ್ಕೆ ಅನುಮೋದಿಸಿಲ್ಲ. ಮಾಲೂರು ಘಟಕದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿರುವ ಆರ್. ನರಸಿಂಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಗಮನಕ್ಕೆ ಬಾರದೆ ಸಂಘಧ ಅಧ್ಯಕ್ಷ ಮುನಿನಾರಾಯಣ್ ಬೈಲಾ ನಿಯಮ ಉಲ್ಲಂಘನೆ ಮಾಡಿ ಸ್ವಾರ್ಥಕ್ಕಾಗಿ ಇಬ್ಬರು ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅದನ್ನು ಜಿಲ್ಲಾ ಸಂಘ ಅನುಮೋದಿಸಿದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದ್ದಾರೆ. ಪಧಾಧಿಕಾರಿಗಳ ವಿಶ್ವಾಸ ಪಡೆಯದೆ ಸ್ವಾರ್ಥಕ್ಕಾಗಿ ಸಂಘವನ್ನು ಉಪಯೋಗಿಸಿಕೊಳ್ಳುತ್ತಿರುವ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಹಾಗೂ ತಾಲೂಕು ಅಧ್ಯಕ್ಷ ಮುನಿನಾರಯಣ್ ಕಾರ್ಯ ವೈಖರಿ ಬಗ್ಗೆ ರಾಜ್ಯ ಸಂಘಕ್ಕೆ ವರದಿ ಕಳುಹಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement