ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಿಡಿಒ ಧೋರಣೆ ಖಂಡಿಸಿ ಇಒಗೆ ದಿಗ್ಬಂಧನ

Mainashree
Updated On : 6 Dec 2013, 12:27 pm

ಕ.ಪ್ರ.ವಾರ್ತೆ  ಚಿಂತಾಮಣಿ ಡಿ. 5
ಕೈವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿ ನೀಲೂಪರ್ ಅವರ ಏಕ ಪಕ್ಷೀಯ ಧೋರಣೆ ಖಂಡಿಸಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್‌ಗೆ ದಿಗ್ಬಂಧನ ಹಾಕಿದ ಘಟನೆ ನಡೆಯಿತು.
ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿ, ಪಿಡಿಒ ನೀಲೂಪರ್ ಗ್ರಾಪಂ ಅಧ್ಯಕ್ಷೆ ಮುಬೀನಾತಾಜ್ ಅನುಮತಿ ಪಡೆಯದೆ ಸಾಮಾನ್ಯ ಸಭೆ ಕೇವಲ 4 ದಿನಗಳಿಗೆ ಖಚಿತ ಪಡಿಸಿ, ಸಾರ್ವಜನಿಕರ ಟರಾವು ಪುಸ್ತಕ ಕಿತ್ತುಕೊಂಡು ಏಕ ಪಕ್ಷೀಯವಾಗಿ ವರ್ತಿಸುತ್ತಿರುವ ಅಧಿಕಾರಿಯನ್ನು ಕೂಡಲೇ ಎತ್ತಂಗಡಿ ಮಾಡಬೇಕೆಂದು ಆಗ್ರಹಿಸಿ ಬಿ.ವಿ. ಶ್ರೀನಿವಾಸ್ ಸೇರಿ ಹಲವು ಸದಸ್ಯರು ಇಒ ವಸಂತ್ ಕುಮಾರ್ ವಿರುದ್ಧ ದಿಕ್ಕಾರ ಕೂಗಿದರು. ಕೈವಾರ ಗ್ರಾಪಂ ಸದಸ್ಯರಾದ ಕೆ.ಎಚ್. ಮಂಜುನಾಥ್, ರಾಮಚಂದ್ರಪ್ಪ, ಬೈರೇಗೌಡ, ನಾರಾಯಣಪ್ಪ ತಾಪಂ ಆವರಣದಲ್ಲೇ ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ, ನಗರಠಾಣೆ ವೃತ್ತ ನಿರೀಕ್ಷಕ ನಂಜಪ್ಪ, ಸಬ್‌ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ನಂತರ ಗ್ರಾಪಂ ಪಿಡಿಒರನ್ನು ಅಮಾನತ್ ಪಡಿಸಬೇಕೆಂದು ಆಗ್ರಹಿಸಿ ತಾಲೂಕು ದಂಡಾಧಿಕಾರಿಗೆ ಮನವಿ ನೀಡಿದರು. ಗ್ರಾಪಂ ಅಧ್ಯಕ್ಷ ಮುಬೀನಾತಾಜ್, ಉಪಾಧ್ಯಕ್ಷ ಬಿ.ವಿ. ಶ್ರೀನಿವಾಸ್, ಸದಸ್ಯರಾದ ವೆಂಕಟೇಶ್,ನಾಗರಾಜ್, ಮುನಿನಾರಾಯಣಪ್ಪ, ಕೃಷ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement