ಮುಳಬಾಗಲು: ದೇಶದ ಗಣ್ಯರ ಭಾವಚಿತ್ರಗಳ ಕೊಡುಗೆ
ಮುಳಬಾಗಲು: ತಾಲೂಕಿನ ಪಟ್ರಹಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ. ಸುಧಾಕರ್ ನೇತೃತ್ವದಲ್ಲಿ ಶಾಲೆಗೆ ಜ್ಞಾನಪೀಠ ವಿಜೇತ ಕವಿಗಳ, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ 40 ಮಂದಿಯ ಭಾವಚಿತ್ರಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ. ಸೋಮೇಶ್ ಮತ್ತು ಸಹಶಿಕ್ಷಕಿ ಆರ್. ವಿಮಲಮ್ಮ ನೆರವಿಗೆ ಶ್ಲಾಘಿಸಿದರು, ಗಡಿ ಶಾಲೆಯಲ್ಲಿ ಮಕ್ಕಳಿಗೆ ಗುಣತ್ಮಾಕ ಶಿಕ್ಷಣ ನೀಡಲು ಶ್ರಮಿಸುತ್ತಿರುವುದಾಗಿ ಅವರು ಕನ್ನಡ ಪ್ರಭಕ್ಕೆ ತಿಳಿಸಿದರು. ಶಾಲೆಯ ಭೂದಾನಿಗಳಾದ ಕರೇಗೌಡ ಮಾತನಾಡಿ, ಶಾಲೆ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸುಬ್ರಮಣಿ, ಮಿದ್ದೊಳ ನಾರಾಯಣಪ್ಪ, ವಿಶ್ವನಾಥ್, ನಾರಾಯಣಮ್ಮ, ಮುನಿರತ್ನಪ್ಪ, ಲತಮ್ಮ, ಶಾಂತಮ್ಮ, ವೀಣಾ, ಪುಷ್ಟಾಪತಿ, ಮೌನಿಕಾ, ರಾಮಕ್ಕ ಇದ್ದರು.