ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 6 Dec 2013, 12:27 pm

ವಿಶ್ವ ಏಡ್ಸ್ ದಿನಾಚರಣೆ
ಶ್ರೀನಿವಾಸಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರು ಸರ್ಕಾರದ ಉಚಿತ ಕಾನೂನು ಸಲಹೆ ಮತ್ತು ನೆರುವು ಪಡೆದು ಪರಿಣಿತರಾಗ ಬಹುದೆಂದು ಪಟ್ಟಣದ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು  ಹಾಗೂ ಪ್ರಧಾನ ಸಿವಿಲ್‌ನ್ಯಾಯಾಧೀಶ ಮಂಜುನಾಥ ಡಿ.ಆರ್. ತಿಳಿಸಿದರು. ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮತ್ತು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಐಸಿಟಿಸಿ ವಿಭಾಗದಿಂದ ಪಟ್ಟಣದ ಸರ್ಕಾರಿ ಬಾಲಕಿಯರ  ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವಕೀಲ ಕೆ. ಶಿವಪ್ಪ, ಎಚ್‌ಐವಿ ತಡೆಯುವ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು. ಟಿ. ವೆಂಕಟೇಶ್, ಜಿ.ಆರ್. ರಮೇಶ್, ಎ.ವಿ. ಅರ್ಜುನ್, ಬಿ.ಸಿ. ಆರವಿಂದ್ ಹಾಗೂ ಆರ್. ವೆಂಕಟರೆಡ್ಡಿ ಇದ್ದರು.
'ಬಿಸಿಯೂಟ ನೌಕರರ  ಮಷ್ಕರಕ್ಕೆ ಬೆಂಬಲ'
ಗುಡಿಬಂಡೆ: ಬಿಸಿಯೂಟ ನೌಕರರಿಗೆ ಸೂಕ್ತ ವೇತನ ಹಾಗೂ ಸೇವಾ ಭದ್ರತೆ ಒದಗಿಸಲು ರಾಜ್ಯಾದಾದ್ಯಂತ ನಡೆಸುತ್ತಿರುವ ಮುಷ್ಕರಕ್ಕೆ ತಾಲೂಕಿನಿಂದ 160 ಜನ ಭಾಗಿಯಾಗುತ್ತಿರುವುದಾಗಿ ತಾಲೂಕು ಅಧ್ಯಕ್ಷೆ ಭಾಗ್ಯಲಕ್ಷ್ಮಮ್ಮ ತಿಳಿಸಿದ್ದಾರೆ. ಸರ್ಕಾರ ಬೇಡಿಕೆ ಈಡೇರಿಸುವವರೆಗೆ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಕೆ.ಎನ್. ಸರಸ್ವತಮ್ಮ, ರುಕ್ಮಣಮ್ಮ, ಸಿಐಟಿಯು ಮಂಜುಳ, ರತ್ನಮ್ಮ, ಲಕ್ಷ್ಮೀದೇವಿ, ಭಾರತಿ, ಲಕ್ಷ್ಮಮ್ಮ ಇದ್ದರು.
ಚಿನ್ನದ ಸರ ನೀಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ
ಬಂಗಾರಪೇಟೆ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಒಂದೂವರೆ ಲಕ್ಷ ರು. ಮೌಲ್ಯದ ಚಿನ್ನದ ಸರ ಟೀ ಮಾರುವ ವ್ಯಕ್ತಿಗೆ ದೊರಕಿದ್ದು ಅದನ್ನು ಆತ ಪ್ರಾಮಾಣಿಕತೆಯಿಂದ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾನೆ. ರೈಲು ನಿಲ್ದಾಣದ ಪ್ಲಾಟ್‌ಫಾರಂ 3ರಲ್ಲಿ ಟೀ ಮಾರುವ ಮುರಳಿ ಎಂಬವರಿಗೆ 41ಗ್ರಾಂ ತೂಕದ ಚಿನ್ನದ ಸರ ದೊರಕಿದೆ. ನಿಲ್ದಾಣದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ವಿಚಾರಿಸಿದ್ದಾನೆ ಯಾರೂ ವಾರಸುದಾರರು ಪತ್ತೆಯಾಗಲಿಲ್ಲ, ಬೇರೊಬ್ಬರಾಗಿದ್ದರೆ ಯಾರಿಗೂ ಹೇಳದೆ ಸರ ತನ್ನದಾಗಿಸಿಕೊಳ್ಳುತ್ತಿದ್ದರು. ಆದರೆ ಟೀ ಮಾರುವ ಮುರಳಿ ನೇರವಾಗಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾನೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ ಕಳೆದುಕೊಂಡಿರುವ ವ್ಯಕ್ತಿಗಳು ಸೂಕ್ತ ದಾಖಲೆಗಳೊಂದಿಗೆ ರೈಲ್ವೆ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement