ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ
ಕೆಜಿಎಫ್: ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನಿಟ್ಟು ಮಾಲಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕ ನಾರಾಯಣಸ್ವಾಮಿ, ಭಾರತದ ಸಂವಿದಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಇಂದಿಗೂ ದೀನದಲಿತರ ಮನದಲ್ಲಿ ಜೀವಿಸುತ್ತಿದ್ದಾರೆ ಎಂದರು. ಅವರು ನೀಡಿದ ಹಕ್ಕುಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿ ಇತರರಿಗೆ ಸಹಕರಿಸಬೇಕು ಎಂದರು. ಆರ್. ಕುಮಾರ್, ಎನ್. ನಟರಾಜನ್, ಎಂ. ನರಸಿಂಹ, ನಾಗರಾಜ, ರಘುಪತಿ, ಜಿ. ಸತ್ಯವೇಲು, ಲೋಗನಾಥನ್, ಮಸೂದ್‌ಉಮ್ರಾನ್, ಸಿ. ಶ್ರೀನಿವಾಸ್, ಪಾಪಣ್ಣ ಇದ್ದರು.