ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಲೆ ಸುರಳಿ ಕೀಟದ ನಿಯಂತ್ರಣ ಕುರಿತು ಅಧಿಕಾರಿಗಳಿಂದ ಮಾಹಿತಿ

Rashmi Kasaragodu
Updated On : 7 Dec 2013, 12:32 pm

ಶಿಡ್ಲಘಟ್ಟ: ರೇಷ್ಮೆ ಬೆಳೆಗಾರರಿಗೆ ನಷ್ಟವನ್ನುಂಟು ಮಾಡುವ ಎಲೆ ಸುರಳಿ ಕೀಟದ ನಿಯಂತ್ರಣದ ಬಗ್ಗೆ ರೇಷ್ಮೆ ಇಲಾಖೆ ಅಧಿಕಾರಿಗಳು ಗುರುವಾರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೈತರಿಗೆ ಅರಿವು ಮೂಡಿಸಿದರು.
ಇತ್ತೀಚೆಗೆ ತಾಲೂಕಿನಲ್ಲಿ ಎಲೆ ಸುರಳಿ ಕೀಟದ ಹಾವಳಿ ಹೆಚ್ಚಾಗಿದ್ದು, ವಿಜ್ಞಾನಿಗಳು ಭೇಟಿ ನೀಡಿ ಅದರ ಹತೋಟಿಗಾಗಿ ಬಳಸಬೇಕಾದ ಔಷಧಿಗಳ ಬಗ್ಗೆ ಮಾಹಿತಿ ನೀಡಿ, ತಲಗಟ್ಟಪುರದ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮೂಲಕ ಜೈವಿಕ ನಿಯಂತ್ರಣಕ್ಕೆ ಮುಂದಾಗಿದ್ದರು. ಈಗ ರೇಷ್ಮೆ ಇಲಾಖೆಯ ಮೂಲಕ ಕರಪತ್ರ ಹಂಚುತ್ತಾ ರೋಗ ನಿಯಂತ್ರಿಸುವ ಬಗ್ಗೆ ಮಾಹಿತಿ ನೀಡುವ ಪ್ರಚಾರಾಂದೋಲನ ಪ್ರಾರಂಭಿಸಿದ್ದಾರೆ.
ರೇಷ್ಮೆ ಗೂಡಿನ ಮಾರುಕಟ್ಟೆ ಹಾಗೂ ರೇಷ್ಮೆ ವಿಸ್ತರಣಾ ಕೇಂದ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ರೇಷ್ಮೆ ಬೆಳೆಗಾರರಿಗೆ ರೋಗ ಹತೋಟಿಯಲ್ಲಿಡಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿಸುವುದು ಮತ್ತು ರೋಗ ಹತೋಟಿಗೆ ತರುವುದು ನಮ್ಮ ಉದ್ದೇಶ ಎಂದು ಜಿಪಂ ರೇಷ್ಮೆ ಉಪನಿರ್ದೇಶಕ ಬಿ.ಆರ್. ನಾಗಭೂಷಣ್ ತಿಳಿಸಿದರು.
ವಿಜಯಪುರದ ಕೇಂದ್ರ ರೇಷ್ಮೆ ಮಂಡಳಿ ಬಿತ್ತನೆ ಕೋಠಿಯ ರೇಷ್ಮೆ ಉಪನಿರ್ದೇಶಕ ಡಾ. ಫಣಿರಾಜ್, ಜಿಪಂ ರೇಷ್ಮೆ ಉಪನಿರ್ದೇಶಕ ಬಿ.ಆರ್. ನಾಗಭೂಷಣ್, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ. ಚಂದ್ರಪ್ಪ, ರೇಷ್ಮೆ ವಿಸ್ತರಣಾಧಿಕಾರಿ ಎಂ. ನಾರಾಯಣಸ್ವಾಮಿ, ಕೆ. ತಿಮ್ಮರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement