ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿಂತಾಮಣಿಯಲ್ಲಿ ಉದ್ಯೋಗ ಮೇಳ

Rashmi Kasaragodu
Updated On : 7 Dec 2013, 12:31 pm

ಚಿಂತಾಮಣಿ: ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ಯುವಕ ಯುವತಿಯರು ಉಪಯೋಗ ಪಡೆದುಕೊಳ್ಳಬೇಕೆಂದು ಕೂಲಿ ಸಂಘದ ತೌಫಿಕ್ ಹೇಳಿದರು.
ನಗರದ ವಾಲ್ಮೀಕಿ ಸರ್ಕಲ್ ಬಳಿ ಇರುವ ಕೂಲಿ ಸಂಘ ಹಾಗೂ ಎಡಿಎಟಿಎಸ್ ಕಾರ್ಯಾಲಯದಲ್ಲಿ ಕೂಲಿ ಮಕ್ಕಳಿಗೆ ವಿವಿಧ ಖಾಸಗಿ ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಲು ಶಬರಿ ಗ್ರೂಪ್‌ನಿಂದ ಏರ್ಪಡಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಮದ್ಯವರ್ತಿಗಳ ಆಮಿಷಗಳಿಗೆ ನಿರುದ್ಯೋಗಿಗಳು ಕಿವಿಗೊಡದೆ ನೇರ ಕಂಪನಿ ಅಧಿಕಾರಿಗಳ ಜೊತೆ ಚರ್ಚಿಸಿ ಭವಿಷ್ಯ ರೂಪಿಸಿಕೊಳ್ಳಲು ಇಂತಹ ಉದ್ಯೋಗ ಮೇಳದಲ್ಲಿ ಅವಕಾಶವಿದೆ ಎಂದರು. ನಂತರ ಬೆಂಗಳೂರು, ಹೈದರಾಬಾದ್, ಚೆನೈ ಸೇರಿದಂತೆ 18 ಕಂಪನಿಗಳು ಉದ್ಯೋಗ ಮೇಳದಲ್ಲಿ ವಿದ್ಯಾರ್ಹತೆಗೆ ತಕ್ಕಂತೆ ನಿರುದ್ಯೋಗಿ ಯುವಕ ಯುವತಿಯರ ಸಂದರ್ಶನ ನಡೆಸಿದರು. ಸುಕುಮಾರ್, ವೆಂಕರಾಯಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement