ಮಾಲೂರಿನಲ್ಲಿ ದಿನಾಚರಣೆ
ಮಾಲೂರು: ದೇಶದಲ್ಲಿ ಸರ್ವರೂ ಸಮಪಾಲು-ಸಮಬಾಳು ಹೊಂದಿರಬೇಕೆಂಬ ಆಶಯ ಹೊಂದಿದ್ದ ಡಾ.ಅಂಬೇಡ್ಕರ್ ಪ್ರಪಂಚ ಕಂಡ ಅತ್ಯುತ್ತಮ ಸಂವಿಧಾನಕಾರ ಎಂದು ದಲಿತ ಮುಖಂಡ ಪಾಪಣ್ಣ ಹೇಳಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರ 57ನೇ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಶುಕ್ರವಾರ ಪಟ್ಟಣದ ಬಸ್‌ನಿಲ್ದಾಣ ಬಳಿಯ ಉದ್ಯಾನವನದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಹೂವಿನ ಹಾರ ಹಾಕಿ ಗೌರವ ಸೂಚಿಸಿ ಮಾತನಾಡಿ, ಶೋಷಿತ ಜನರನ್ನು ಜಾಗೃತಗೊಳಿಸಲು ತಮ್ಮ ಜೀವನವನ್ನೇ ಮುಡುಪಿಟ್ಟ ಧೀಮಂತ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದರು. ಆಂಜಿನಪ್ಪ, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ,ಪ ುರಸಭೆ ಸದಸ್ಯ ವೇಮನ, ಮುರಳೀಧರ್ ತಿ. ಶ್ರೀನಿವಾಸ್, ವೆಂಕಟೇಶ್ ಮಾತನಾಡಿದರು. ಅರಳೇರಿ ನಾರಾಯಣಸ್ವಾಮಿ, ಕೂ. ಗೋಪಾಲ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ಜಿಪಂ ಸದಸ್ಯ ರಾಮಸ್ವಾಮಿ ರೆಡ್ಡಿ ಇದ್ದರು. ಇದೇ ಸಂಧರ್ಭದಲ್ಲಿ ದಲಿತ ಸಾಂಸ್ಕೃತಿಕ ಕಲಾ ತಂಡದವರಿಂದ ಗಾಯನ ನಡೆಯಿತು.