ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಶೌಚಾಲಯ ಕೆಡವಿದವರ ವಿರುದ್ಧ ಕ್ರಮ ಕೈಗೊಳ್ಳಿ'

Rashmi Kasaragodu
Updated On : 7 Dec 2013, 12:32 pm

ಚಿಂತಾಮಣಿ: ತಪತೇಶ್ವರ ದಲಿತ ಕಾಲೋನಿ ನಿವಾಸಿಗಳಿಗೆ ಸರ್ಕಾರ ವತಿಯಿಂದ ನಿರ್ಮಿಸಿರುವ ಸಾಮೂಹಿಕ ಶೌಚಾಲಯವನ್ನು ಕೆಡವಿ ಅತಿಕ್ರಮಣ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.
ನಗರದ ತಪತೇಶ್ವರ ಕಾಲೋನಿಯ ದಲಿತ ನಿವಾಸಿಗಳಿಗಾಗಿ ಸರ್ಕಾರದ ಸ್ಲಂ ಬೋರ್ಡ್ ವತಿಯಿಂದ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ತಪತೇಶ್ವರ ಕಾಲೋನಿಯ ಮಹಿಳೆಯರಿಗೆ ಅನುಕೂಲವಾಗಲೆಂದು ಸಾಮೂಹಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ ರಾಜಕೀಯ ಭೂ ಮಾಫಿಯಾಗಳಾದ ಅಶ್ವಥರೆಡ್ಡಿ, ಕಿರಿಕ್ ಕೃಷ್ಣ ಸೇರಿದಂತೆ ಮತ್ತಿತರರು ರಾತ್ರೋ ರಾತ್ರಿ ಸಾಮೂಹಿಕ ಶೌಚಾಲಯವನ್ನು ಕೆಡವಿ ಶೌಚಾಲಯದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ರಾಜಕೀಯ ಹಾಗೂ ಹಣ ಬಲದಿಂದ ನೆಲಸಮ ಮಾಡಿದ ಸ್ಥಳದಲ್ಲಿ ಸೈಟುಗಳನ್ನು ನಿರ್ಮಾಣ ಮಾಡಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿ ನಗರಸಭೆ ಆಯುಕ್ತರಿಗೆ ಹಾಗೂ ಸ್ಥಳೀಯ ಪೋಲೀಸರಿಗೆ ದೂರು ನೀಡಿದ್ದಾರೆ.
ಸರ್ಕಾರ ದಲಿತರ ಮೂಲಭೂತ ಸೌಲಭ್ಯಗಳಿಗಾಗಿ ಕೋಟ್ಯಂತರ ರುಪಾಯಿ ಅನುದಾನ ನೀಡಿ ದಲಿತರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿರುವುದು ಸರಿ. ಆದರೆ ಸರ್ಕಾರಿ ಸ್ಥಳ ಸುಮಾರು 10 ಗುಂಟೆಯಷ್ಟು ಜಮೀನನ್ನು ಭೂ ಗಳ್ಳರು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ಮಾಡಿ ಕೋಟ್ಯಧಿಪತಿಗಳಾಗಲು ಮುಂದಾಗಿದ್ದಾರೆ ಎಂದು ಆರೋಪಿಸಿ ಕಾಲೋನಿ ನಿವಾಸಿಗಳಾದ ವಿ.ಶಿವ, ಮಂಜುನಾಥ್,ಬಾಲು, ಮುನಿರಾಜು, ಮಾರಪ್ಪ, ರಾಮಾಂಜಿ, ಶ್ರೀರಾಮ, ಎನ್.ಮೂರ್ತಿ, ರತ್ನಮ್ಮ, ಲಕ್ಷ್ಮಿ, ಮುನಿನರಸಮ್ಮ, ಪಕೀದಾ,ನೇತ್ರಾ, ಗೌರಮ್ಮ, ಮುನಿಯಮ್ಮ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement