ಶ್ರೀನಿವಾಸಪುರದಲ್ಲಿ: ರೋಗಿಗಳಿಗೆ ಹಣ್ಣು ವಿತರಣೆ
ಶ್ರೀನಿವಾಸಪುರ: ಡಾ. ಅಂಬೇಡ್ಕರ್‌ರವರ ಪರಿನಿರ್ವಾಣ ದಿನದ ಅಂಗವಾಗಿ ಜೆಡಿಎಸ್ ಪಕ್ಷದ ದಲಿತ ಮುಖಂಡರು ಪಟ್ಟಣದ ಸರ್ಕಾರಿ ಅಸ್ಪತ್ರೆ ಒಳರೋಗಿಗಳಿಗೆ ಹಣ್ಣು ವಿತರಿಸಿದರು. ಅಂಬೇಡ್ಕರ್‌ರವರು ಸಮಾಜದಲ್ಲಿ ಕಾಡುತ್ತಿದ್ದ ಜಾತಿ ಭೂತವನ್ನು ಹೋಗಲಾಡಿಸಿದವರು ಎಂದು ವರ್ತನಹಳ್ಳಿ ವೆಂಕಟೇಶ್ ತಿಳಿಸಿದರು. ಚಲ್ದಿಗಾನಹಳ್ಳಿ ವೆಂಕಟೇಶ್ ಮಾತನಾಡಿ, ಅಂಬೇಡ್ಕರ್‌ರವರ ಆದರ್ಶಗಳನ್ನು ದಲಿತರು ಮೈಗೂಡಿಸಿಕೊಂಡು ನಡೆದಲ್ಲಿ ಅಂಬೇಡ್ಕರ್‌ರವರ ಅತ್ಮಕ್ಕೆ ಶಾಂತಿ ಕೊಟ್ಟಂತಾಗುತ್ತದೆ ಎಂದರು. ಕಂಬಾಲಹಳ್ಳಿ ನರಸಿಂಹಪ್ಪ, ದ್ವಾರಸಂದ್ರ ಈಶ್ವರಪ್ಪ, ಉನಿಲಕಿಲಿ ವೆಂಕಟರವಣ, ವೈದ್ಯರಾದ ಡಿ. ಸಂಪತ್ ಕುಮಾರ್, ಡಾ. ಮೀನಾ ಇದ್ದರು.
ಅಪಘಾತ; ಮೂರು ಮಂದಿಗೆ ಗಾಯ
ಟೇಕಲ್: ಹುಳದೇನಹಳ್ಳಿ ರಸ್ತೆಯಲ್ಲಿ ಎರಡು ಬೈಕ್‌ಗಳು ಅಪಘಾತಕ್ಕೀಡಾಗಿ ಮೂರು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಗುಂಡ್ಲಹಳ್ಳಿಯ 10ನೇ ತರಗತಿ ವಿದ್ಯಾರ್ಥಿ ವಿಜಯ್‌ಕುಮಾರ್, 9ನೇ ತರಗತಿ ವಿದ್ಯಾರ್ಥಿ ಶ್ರೀನಾಥ್ ಬೈಕಿನಲ್ಲಿ ಬರುತ್ತಿರುವಾಗ ಎದುರಿನಿಂದ ಬಂದ ಅನಿಗಾನಹಳ್ಳಿ ಮಂಜುನಾಥ ಅವರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಪ್ರಥಮ ಚಿಕಿತ್ಸೆಯನ್ನು ಟೇಕಲ್ ಆಸ್ಪತ್ರೆಯಲ್ಲಿ ನೀಡಿ ನಂತರ ಇವರನ್ನು ದೇವರಾಜ್ ಅರಸ್ ಮೆಡಿಕಲ್ ಕಾಲೇಜಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಟೇಕಲ್ ಹೊರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.