ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಸಂವಿಧಾನ ಶೋಷಿತರ ಪಾಲಿಗೆ ವರದಾನ'

Rashmi Kasaragodu
Updated On : 7 Dec 2013, 12:26 pm

ಗೌರಿಬಿದನೂರು: ಡಾ. ಅಂಬೇಡ್ಕರ್ ಬರೆದಿರುವ ಸಂವಿಧಾನ ಎಂದೆಂದಿಗೂ ಚಿರಸ್ಥಾಯಿ ಹಾಗೂ ಶೋಷಿತರ ಪಾಲಿಗೆ ವರದಾನವಾಗಿದೆ ಎಂದು ತಾಲೂಕು ದಂಡಾಧಿಕಾರಿ ಎನ್. ಭಾಸ್ಕರ್ ಶ್ಲಾಘಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಸ್ತೂಪಕ್ಕೆ ಮಾಲಾರ್ಪಣೆ ಮಾಡಿದ ಅವರು ಅಂಬೇಡ್ಕರ್ ಎಲ್ಲಾ ಜಾತಿ ವರ್ಗಗಳ ಧೀಮಂತ ನಾಯಕ ವಿಶ್ವಕಂಡ ಮಹಾನ್ ದಾರ್ಶನಿಕ ವ್ಯಕ್ತಿಗಳಲ್ಲಿ ಇವರದೇ ಆದ ಚಾಪು ಮೂಡಿಸಿದ ಮಹಾನ್ ಚೇತನ ಎಂದೂ ವರ್ಣಿಸಿದರು.ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ರೆಡ್ಡಪ್ಪ ಮಾತನಾಡಿ ಅಂಬೇಡ್ಕರ್ ತತ್ವಗಳಾದ ಶಿಕ್ಷಣ, ಹೋರಾಟ, ಸಂಘಟಣೆ, ಈ ಮೂರು ತತ್ವಗಳು ಈ ಕಾಲದ ಯುವ ಪೀಳಿಗೆ ಮೈಗೂಡಿಸಿಕೊಂಡರೆ ಸಮಾನತೆ ಕಾಣಬಹುದು ಎಂದು ತಿಳಿಸಿದರು.
ದಲಿತ ಮುಖಂಡ ಬಿ.ಕೆ. ನರಸಿಂಹಮೂರ್ತಿ ಮಾತನಾಡಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಹಾಗೂ ದಲಿತರ ಏಳಿಗೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟಿರುವ ಮಹಾನ್ ವ್ಯಕ್ತಿ ಹಾಗೂ ವಿಶ್ವ ಮಾನವ ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ. ನಂಜುಂಡಪ್ಪ ಮಾತನಾಡಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಧಿಕಾರಿ ಪುರುಷೋತ್ತಮ್ ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ವೈದ್ಯಾಧಿಕಾರಿ ಶ್ಯಾಮ್‌ಸುಂದರ್, ಪುರಸಭೆ ಪರಿಸರ ಅಭಿಯಂತರ ತಿಮ್ಮರಾಜು ಮತ್ತು ದಲಿತ ಮುಖಂಡರಾದ  ಮಂಚೇನಹಳ್ಳಿ ನಾರಾಯಣಸ್ವಾಮಿ, ಗಂಗಾಧರ, ಮೂರ್ತಿ, ನಾಗರಾಜ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement