ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಕ್ರಮ ಮರಳು: ತಡೆಯಲು ಹೋದ ಅಧಿಕಾರಿ ಮೇಲೆ ಹಲ್ಲೆ

Rashmi Kasaragodu
Updated On : 8 Dec 2013, 12:59 pm

ಮುಳಬಾಗಲು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಲ್ಯಾಂಕೋ ಮರಳು ಟೋಲ್ ಗೇಟ್ ಬಳಿ ಅಕ್ರಮ ಮರಳು ಟ್ರ್ಯಾಕ್ಟರ್ನ್ನು ತಡೆಯಲು ಹೋದ ಗ್ರಾಮಲೆಕ್ಕಾಧಿಕಾರಿ ಸಿ.ವಿ. ಮುನೇಶ್ ಮೇಲೆ ಹಲ್ಲೆ ನಡೆದ ಘಟನೆ ವರದಿಯಾಗಿದೆ.
ಮುಳಬಾಗಲು ಕಡೆಯಿಂದ ಕೋಲಾರ ಕಡೆ ಹೋಗುತ್ತಿದ್ಜ ಅಕ್ರಮ ಮರಳು ಟ್ರ್ಯಾಕ್ಟರ್ ಅನ್ನು ತಡೆದಿದ್ದಾರೆ, ಆಗ ಅವರ ಮೇಲೆ ಕರವೇ ಮುಖಂಡನೆಂದು ಹೇಳಿಕೊಂಡ ರಾಧಕೃಷ್ಣ ಎಂಬವರು ಅನುಚರರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ. ಅವರು ಈ ಕುರಿತು ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಿದ್ದಾರೆ. ತಕ್ಷಣ ಕೋಲಾರ ಅಪರ ಜಿಲ್ಲಾಧಿಕಾರಿ ನವೀನ್ ಕುಮಾರ್ ಮತ್ತು ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಸಿಸಿ ಕ್ಯಾಮರ ಮೂಲಕ ಹಲ್ಲೆಯಾಗಿರುವ ಕುರಿತು ವರದಿ ಪಡೆದು ಮುಳಬಾಗಲು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಮುಳಬಾಗಲು ಪೊಲೀಸರು ರಾಧಕೃಷ್ಣ ಮತ್ತು ಮೂವರ ಮೇಲೆ ಕೇಸು ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಖಂಡನೆ: ಸರ್ಕಾರಿ ಕೆಲಸ ನಿರ್ವಹಿಸುವ ವೇಳೆ ಗ್ರಾಮ ಲೆಕ್ಕಾಧಿಕಾರಿ ಸಿ.ವಿ. ಮುನೇಶ್ ಮೇಲೆ ನಡೆದ ಹಲ್ಲೆಯನ್ನು ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಮತ್ತು ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ವಿಜಯಕುಮಾರ್ ಖಂಡಿಸಿದ್ದಾರೆ. ಈ ಸಂಬಂಧ ಮುಳಬಾಗಲು ತಹಸೀಲ್ದಾರ್ ಡಿ.ವಿ. ರಾಮಮೂರ್ತಿರವರಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡಲು, ಆರೋಪಿಗಳನ್ನು ಬಂಧಿಸಲು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement