ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿ
ಯುವಜನೋತ್ಸವದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಏಕಾಂತಾಭಿನಯ (ಹಿಂದಿ-ಇಂಗ್ಲಿಷ್), ಆಶುಭಾಷಣ, ಗೀಟಾರ್, ತಬಲ, ಹಾರ್ಮೋನಿಯಂ, ಕೊಳಲು ನುಡಿಸುವ ಸ್ಫರ್ಧೆಗಳು, ಶಾಸ್ತ್ರೀಯ ನೃತ್ಯಗಳಾದ, ಭರತನಾಟ್ಯ, ಕುಚಪುಡಿ, ಕಥಕ್ ಮತ್ತಿತರ ಸ್ಫರ್ಧೆಗಳು ಇದ್ದವು.
ಇಲ್ಲಿ ಜಾನಪದ ನೃತ್ಯಕ್ಕೆ ನಾಲ್ಕಾರು ತಂಡಗಳು ಭಾಗವಹಿಸಿ, ಸ್ಪರ್ಧೆ ನೀಡಿದ್ದನ್ನು ಬಿಟ್ಟರೆ ಉಳಿದ ಯಾವುದಕ್ಕೂ ಹೆಚ್ಚಿನ ಸ್ಫರ್ಧಿಗಳೇ ಇರಲಿಲ್ಲ. ಕೆಲವು ಸ್ಪರ್ಧೆಗಳಿಗೆ ಯಾರು ಭಾಗವಹಿಸಲಿರಲಿಲ್ಲ. ಶಾಸ್ತ್ರೀಯ ವಾದ್ಯ ವಿಭಾಗದಲ್ಲಿ ಕೊಳಲು ಒಬ್ಬ ಹಾಗೂ ಕಥಕ್ ನೃತ್ಯವನ್ನು ಒಬ್ಬ ಸ್ಪರ್ಧಿ ಮಾತ್ರ ಮಾಡಿದರು. ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಭರತನಾಟ್ಯಕ್ಕೆ ಮೂವರು ಮಾತ್ರ ಭಾಗವಹಿಸಿ ತಮ್ಮ ಪ್ರದರ್ಶನ ನೀಡಿದರು. ಒಟ್ಟಿನಲ್ಲಿ ಜಿಲ್ಲೆಯ ಯುವಕ ಯುವತಿಯರನ್ನು ಪ್ರೋತ್ಸಾಹಿಸಿ, ಅವರ ಕಲಾಪ್ರತಿಭೆಯನ್ನು ಹೊರಚೆಲ್ಲಬೇಕಾದ ಕಾರ್ಯಕ್ರಮವೊಂದು ನೀರಸ ನಡೆಯುವಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಂತಿತ್ತು.