ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಲುಷಿತ ನೀರು ಸೇವನೆ; 20 ಮಂದಿ ಅಸ್ವಸ್ಥ

Rashmi Kasaragodu
Updated On : 8 Dec 2013, 1:00 am

ಶಿಡ್ಲಘಟ್ಟ: ಪುರಸಭೆ ನಿರ್ಲಕ್ಷ್ಯದಿಂದ ಕಲುಷಿತ ನೀರು ಕುಡಿದು ಪಟ್ಟಣದ ಉಲ್ಲೂರು ಪೇಟೆಯಲ್ಲಿ ವಾಂತಿ ಭೇದಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪುರಸಭೆ ವಾರಕ್ಕೊಮ್ಮೆ ಕುಡಿಯುವ ನೀರು ಬಿಡುತ್ತಿದ್ದು, ಉಲ್ಲೂರು ಪೇಟೆಯಲ್ಲಿ ಕಲುಷಿತ ನೀರು ಬಿಟ್ಟ ಪರಿಣಾಮ ಸುಮಾರು 20 ಜನರಿಗೆ ವಾಂತಿ ಭೇದಿಯಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಸಾರ್ವಜನಿಕ ವೈದಾಧಿಕಾರಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪುರಸಭೆ ಅಧಿಕಾರಿಗಳಿಗೆ ಕಾರಣ ತಿಳಿಸಿದ್ದಾರೆ. ಪುರಸಭೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಸ್ವಚ್ಛತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ತಾಲೂಕು ವೈದ್ಯಾಧಿಕಾರಿ ಅನಿಲ್ ಕುಮಾರ್, ಆರೋಗ್ಯಾಧಿಕಾರಿ ದಾದಾ ಪೀರ್, ವಿಜಯ, ಕುಮಾರ ಸ್ವಾಮಿ ಸಮೀಕ್ಷೆ ನಡೆಸುತ್ತಿದ್ದಾರೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement