ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾರ್ಮಿಕ ಒಕ್ಕೂಟದಿಂದ ಪರಿನಿರ್ವಾಣ ದಿನ

Rashmi Kasaragodu
Updated On : 8 Dec 2013, 1:00 am

ಕೆಜಿಎಫ್: ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಬೆಮೆಲ್ ಕಾರ್ಖಾನೆಯ ಎಸ್ಸಿ, ಎಸ್ಟಿ ಕಾರ್ಮಿಕ ಒಕ್ಕೂಟ ಸಹಕಾರ ಸಂಘದ ಅಧ್ಯಕ್ಷ ಆರ್. ರಾಜಶೇಖರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೆಮೆಲ್ನಗರದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬೆಮೆಲ್ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಂಣ್ಣು ವಿತರಿಸಿದರು. ಈ ವೇಳೆ ಬೆಮೆಲ್ ಕಾರ್ಮಿಕ ಒಕ್ಕೂಟ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ, ಡಾ.ಪಿ. ರಮೇಶ್, ಕೆ. ತಂಗದುರೈ, ಗೋಪಿನಾಥ್ ಇದ್ದರು.
ಇಂದು ವಕ್ಕಲಿಗರ ಸಭೆ
ಕೋಲಾರ: ಚಿಕ್ಕಬಳ್ಳಾಪುರದ ಆದಿ ಚುಂಚನಗಿರಿ ಮಹಾ ಸಂಸ್ಥಾನದಲ್ಲಿ ಮುಂದಿನ ಭಾನುವಾರ ನಡೆಯಲಿರುವ ಹನುಮ ಜಯಂತಿ ಪ್ರಯುಕ್ತ ನವಗ್ರಹಗಳ ನೂತನ ಮಂದಿರ ಉದ್ಘಾಟನೆ ಮತ್ತು ಗುರುಸಂಸ್ಮರಣೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಡಿ.8 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ವಕ್ಕಲಿಗರ ಸಭೆಯನ್ನು ನಗರದ ವಕ್ಕಲಿಗರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಕರೆದುಕೊಂಡು ಹೋಗಬೇಕಾಗಿರುವುದರಿಂದ ಸಭೆಯಲ್ಲಿ ಹಾಜರಾಗಬೇಕೆಂದು ಕೆ.ವಿ. ಶಂಕರಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement