ಗ್ರಾಪಂ ಚುನಾವಣೆ; ಬಿಗಿ ಭದ್ರತೆ
ಶಿಡ್ಲಘಟ್ಟ: 8 ರಂದು ಗ್ರಾಪಂ ಚುನಾವಣೆಗಳು ನಡೆಯುವುದರಿಂದ ಆಯಾ ಗ್ರಾಪಂಗಳಿಗೆ ಸೂಕ್ತ ಭದ್ರತೆ ಏರ್ಪಡಿಸಲಾಗಿದೆ. ಹೊಸಪೇಟೆ, ನಾಗಮಂಗಲ, ಭಕ್ತರ ಹಳ್ಳಿ, ಮಳ ಮಾಚನಹಳ್ಳಿ ಗ್ರಾಪಂಗಳಿಗೆ ಚುನಾವಣೆ ಘೋಷಣೆಯಾಗಿದ್ದು, 8 ರ ಭಾನುವಾರ ಚುನಾವಣ ನಡೆಯಲಿದೆ. ಚುನಾವಣೆ ಭದ್ರತೆಗಾಗಿ ಚಿಂತಾಮಣಿ ಡಿವೈಎಸ್ಪಿ ಸಣ್ಣ ತಿಮ್ಮಪ್ಪ, ಸಬ್ಇನ್ಸ್ಪೆಕ್ಟರ್ ಶ್ರೀನಿವಾಸ ಮೂರ್ತಿ, ಪಿಎಸ್ಐ ಹನುಮಂತಪ್ಪ ಭದ್ರತೆಗೆ ನಿಂತಿದ್ದಾರೆ.
ಮಂಡೇಲಾ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿ ಮೆರವಣಿಗೆ
ಗುಡಿಬಂಡೆ: 27 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿ ಕರಿಯರ ಹಕ್ಕುಗಳಿಗಾಗಿ ಹೋರಾಟ ಮಾಡಿದ ನೆಲ್ಸನ್ ಮಂಡೇಲ ತಮ್ಮ 95 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲು ಪಟ್ಟಣದ ಮುಖ್ಯ ಬೀದಿಯಲ್ಲಿ ಶಾಲಾ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಮೇಣದ ಬತ್ತಿ ಮೆರವಣಿಗೆ ನಡೆಸಿದರು. ತನ್ನ ನಾಡಿಗೆ ಶಾಂತಿ ತಂದುಕೊಟ್ಟ ದಿವ್ಯ ಚೇತನಕ್ಕೆ ಈ ಕ್ಷಣಗಳು ಹಿತಕರವಾಗಿರಲಿ. ಶಾಂತಿಯುತವಾಗಿರಲಿ ಎಂದು ಮೆರವಣಿಗೆಯಲ್ಲಿ ನೆರೆದಿದ್ದ ಮುಖಂಡರು ಮಕ್ಕಳಿಗೆ ಸಲಹೆ ನೀಡಿದರು.