ನೆಲ್ಸನ್ ಮಂಡೇಲಾ ನಿಧನಕ್ಕೆ ಸಂತಾಪ
ಕೋಲಾರ: ದಕ್ಷಿಣ ಆಫ್ರಿಕಾದ ಜನತೆಗೆ ಸ್ವಾತಂತ್ರ್ಯ ಕಲ್ಪಿಸಲು ಹೋರಾಡಿದ ನೆಲ್ಸೆನ್ ಮಂಡೇಲಾ ನಿಧನದಿಂದ ಮಹಾತ್ಮನನ್ನು ಕಳೆದುಕೊಂಡಂತಾಗಿದೆ ಎಂದು ಬಂಗಾರಪೇಟೆ ತಾಲೂಕಿನ ಫೀಲ್ಡ್ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ. ಚಂದ್ರಶೇಖರ್ ಶೋಕ ವ್ಯಕ್ತಪಡಿಸಿದ್ದಾರೆ.ಮಂಡೇಲಾ ನಿಧನಕ್ಕೆ ಸಂತಾಪ ಸೂಚಿಸಲು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನೆಲ್ಸೆನ್ ಮಂಡೇಲಾ ಅವರು ಆಫ್ರಿಕಾ ಗಾಂಧಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಕಪ್ಪು ಜನರಿಗೆ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಕಲ್ಪಿಸುವ ಮೂಲಕ ನೋಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ನಮ್ಮ ದೇಶವೂ ಇವರಿಗೆ ಭಾರತ್ನ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಮಂಡೇಲಾ ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದರು. ಸಭೆಯಲ್ಲಿ ಸಂಸ್ಥೆಯ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್. ಲಕ್ಷ್ಮೀನಾರಾಯಣರೆಡ್ಡಿ, ಶಿಕ್ಷಕರಾದ ಎಲ್. ವೇಣುಗೋಪಾಲ್, ಆದಿಬಯ್ಯಪ್ಪ, ಮಾಗೇರಿ ವೆಂಕಟೇಶ್, ಶಿಕ್ಷಕಿ ಲಕ್ಷ್ಮೀದೇವಿ ಇದ್ದರು.