ಮನೆ ಧ್ವಂಸ ವಿರುದ್ಧ ದೂರು
ಕೋಲಾರ: ತಾಲೂಕಿನ ವಾನರಾಶಿ ಗ್ರಾಮದಲ್ಲಿ ಪ್ರಭಾವಿಗಳ ಕುಮ್ಮಕ್ಕಿನಿಂದ ತಮ್ಮ ಮನೆಯನ್ನು ಅಧಿಕಾರಿಗಳು ದ್ವಂಸಗೊಳಿಸಿದ್ದು ನ್ಯಾಯ ಒದಗಿಸಬೇಕೆಂದು ಗ್ರಾಮದ ನಿವಾಸಿ ಲಕ್ಷ್ಮೀದೇವಮ್ಮ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ವನರಾಶಿ ಗ್ರಾಮದ ಸರ್ವೆ ನಂ.01 ಸರ್ಕಾರಿ ಜಾಗ ಗ್ರಾಮ ಠಾಣಾ ವ್ಯಾಪ್ತಿಯ ಪಕ್ಕದಲ್ಲಿ ಇದ್ದು 20 ಮನೆಗಳನ್ನು ನಿರ್ಮಿಸಲಾಗಿದೆ. ಅಧಿಕಾರಿಗಳು ಮನೆ ಕಟ್ಟಿರುವವರಿಗೆ ನೋಟಿಸ್ ಜಾರಿ ಮಾಡಿ ಸರ್ವೆ ನಂ.16,14ರ ನಮ್ಮ ಸ್ವಂತ ಜಮೀನಿನಲ್ಲಿ ಕಟ್ಟಿಕೊಂಡಿದ್ದ ಮನೆಯನ್ನು ಯಾವುದೇ ನೋಟಿಸ್ ಜಾರಿ ಮಾಡದೆ ಏಕಾಏಕಿ ಜೆಸಿಬಿಯ ಮೂಲಕ ದ್ವಂಸ ಮಾಡಿದ್ದಾರೆಂದು ತಿಳಿಸಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆಯ ನಡುವೆಯೂ ತಮ್ಮ ಮನೆಯನ್ನು ಕೆಡವಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.