'ಶೂದ್ರರಲ್ಲಿ ಜಾಗೃತಿ ಮೂಡಿಸಿ'
ಶಿಡ್ಲಘಟ್ಟ: ದೇಶದಲ್ಲಿ ಶೂದ್ರ ಸಮಾಜವನ್ನು ದುರುಪಯೋಗಪಡಿಸಿಕೊಂಡು ಆರ್ಎಸ್ಎಸ್ ಮತ್ತು ಬಿಜೆಪಿಯವರು ಬಾಬ್ರಿ ಮಸೀದಿ ನೆಲಸಮ ಮಾಡಿದರು ಎಂದು ರಾಜ್ಯ ಶೂದ್ರಶಕ್ತಿ ಸಮಿತಿ ಅಧ್ಯಕ್ಷ ಬಿ.ಆರ್. ರಾಮೇಗೌಡ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬ್ರಾಹ್ಮಣರನ್ನು ಹೊರತುಪಡಿಸಿ ಶೂದ್ರರಲ್ಲಿ ಜಾಗೃತಿ ಮೂಡಿಸಿ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಬೆಳೆಸುವ ಜೊತೆಗೆ ಸರ್ಕಾರ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯ ತಲುಪಿಸಲು ಶೂದ್ರಶಕ್ತಿ ಸಮಿತಿ ರಾಜ್ಯಾದ್ಯಂತ ಬಲಿಷ್ಠಗೊಳಿಸುವುದಾಗಿ ಹೇಳಿದರು.
ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳಿಧರ್ ಹಾಲಪ್ಪ, ತಾಲೂಕು ಅಧ್ಯಕ್ಷ ಸುಗಟೂರು ಎಸ್.ಪಿ. ಬೈರೇಗೌಡ, ಪ್ರಧಾನ ಕಾರ್ಯದರ್ಶಿ ಅಪ್ಪೇಗೌಡನಹಳ್ಳಿ ಗೋವಿಂದರಾಜು, ಸಂಚಾಲಕ ನೂರುಲ್ಲಾ, ಸಂಘಟನೆಯ ಗುಡಿಬಂಡೆ ಜಿ.ಎಂ. ಇನಾಯತ್ ಉಲ್ಲಾ, ನಯಾಜ್ ಪಾಷ, ಮೇಲೂರು ಧಮೇಂದ್ರ ಇದ್ದರು.