ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಿಕ್ಕಿಬಿದ್ದ ಸರಗಳ್ಳನಿಗೆ ಧರ್ಮದೇಟು

Rashmi Kasaragodu
Updated On : 8 Dec 2013, 12:59 pm

ಕೋಲಾರ: ಸರಗಳ್ಳತನಕ್ಕೆ ಯತ್ನಿಸಿ ಸಿಕ್ಕಬಿದ್ದ ಭೂಪನೊಬ್ಬನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಕಠಾರಿಪಾಳ್ಯದಲ್ಲಿ ನಡೆದಿದೆ. ಕಠಾರಿಪಾಳ್ಯದ ಧರ್ಮರಾಯಸ್ವಾಮಿ ದೇವಾಲಯದ ಬಳಿ ಶುಕ್ರವಾರ ರಾತ್ರಿ ತನ್ನ ಗೆಳೆಯನೊಂದಿಗೆ ಬೈಕಿನಲ್ಲಿ ಬಂದು ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗಲು ಯತ್ನಿಸಿದಾಗ ಸಾರ್ವಜನಿಕರು ಆರೋಪಿಗಳನ್ನು ಹಿಂಬಾಲಿಸಿ ಇದೇ ಪ್ರದೇಶದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಬಳಿ ಬೈಕ್ ತಡೆದಾಗ ಶಿವಕುಮಾರ್ ಸಿಕ್ಕಿಬಿದ್ದಿದ್ದು ಇವನೊಂದಿಗೆ ಇದ್ದ ಸ್ನೇಹಿತ ತಪ್ಪಿಸಿಕೊಂಡಿದ್ದಾನೆ.
ಜನತೆಯ ಕೈಗೆ ಸಿಕ್ಕಿಬಿದ್ದ ಶಿವಕುಮಾರ್ ಧರ್ಮದೇಟು ತಿಂದು ಹಣ್ಣುಗಾಯಿ ನೀರುಗಾಯಿ ಆಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ ವಿಚಾರಣೆ ಮುಂದುವರೆಸಿದ್ದಾರೆ. ಆರೋಪಿ ಶಿವಕುಮಾರ್ ಮುಳಬಾಗಲು ತಾಲೂಕಿನ ಬೈರಕೂರು ಹೋಬಳಿಗೆ ಸೇರಿದ ಪೆದ್ದಾಂಡ್ಲಪಲ್ಲಿಯ ನಿವಾಸಿ ಎನ್ನಲಾಗಿದೆ. ನಗರದ ಕಠಾರಿಪಾಳ್ಯ, ಪಿಸಿ ಬಡಾವಣೆ ಸೇರಿದಂತೆ ಇನ್ನಿತರ ಕಡೆ ನಡೆದಿರುವ ಸರಗಳ್ಳತನ ಪ್ರಕರಣದಲ್ಲೂ ಈ ಯುವಕನ ಪಾತ್ರವಿದೆಯೇ ಎಂಬುದನ್ನು ತಿಳಿಯಲು ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement