ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹೆಣ್ಣು ಮಕ್ಕಳು ದೌರ್ಜನ್ಯ ಘಟನೆ ಮೊದಲೇ ಎಚ್ಚೆತ್ತುಕೊಳ್ಳಿ

Rashmi Kasaragodu
Updated On : 8 Dec 2013, 1:01 am

ಗೌರಿಬಿದನೂರು: ಸಮಾಜದಲ್ಲಿ ಮಹಿಳೆಯರು, ಹೆಣ್ಣು ಮಕ್ಕಳ ಮೇಲೆ ನಿತ್ಯ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಇಂತಹ ದೌರ್ಜನ್ಯ ಪ್ರಕರಣಗಳು ನಡೆಯುವ ಮೊದಲೇ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೆಣ್ಣು ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಯ್ಯಪ್ಪರೆಡ್ಡಿ ಕರೆನೀಡಿದರು.
ಅವರು ಶುಕ್ರವಾರ ಕೋಟೆ ಶಾಲಾವರಣದಲ್ಲಿ ಏರ್ಪಡಿಸಿದ್ದ ಬಾಲ್ಯ ವಿವಾಹ, ಮಕ್ಕಳ ರಕ್ಷಣೆ, ವರದಕ್ಷಿಣೆ ನಿರ್ಮೂಲನೆ, ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ಮುಂತಾದ ಪಿಡುಗುಗಳ ಬಗ್ಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಯರ ಸೈಕಲ್ ಜಾಥಾ ಪ್ರಾರಂಭಿಸಿ ಮಾತನಾಡಿದರು.
ವಿದ್ಯಾವಂತರು ಸಹಾ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧಿಗಳಾಗುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂಥ ವಿಷಯವಾಗಿದೆ. ಮಹಿಳೆಯರು ಸಮಾಜದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಶಕ್ತಿವಂತರಾಗಬೇಕಾಗಿದೆ. ಇಂದಿನ ಮಹಿಳೆಯರು ವಿದ್ಯಾವಂತರಾಗಿ ವಿಧೇಶಗಳಲ್ಲಿ ಉತ್ತಮ ಬಾಳನ್ನು ಬಾಳುತ್ತಿದ್ದಾರೆ, ಇಂತಹವರಲ್ಲಿ ಗ್ರಾಮೀಣ ಮಧ್ಯಮ ವರ್ಗದ ಮಹಿಳೆಯರೆ ಹೆಚ್ಚು ಎಂದು ಅಭಿಪ್ರಾಯಪಟ್ಟರು.
ರಾಜ್ಯ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಸಂಘದ ಅಧ್ಯಕ್ಷೆ (ಸುಗ್ರಾಮ) ರೇಣುಕಮ್ಮ ಮಾತನಾಡಿ ಮಹಿಳೆಯರ ಮೇಲೆ ದೌರ್ಜನ್ಯ, ಮಾನಭಂಗ ಮುಂತಾದ ವಿಷಯಗಳಲ್ಲಿ ತ್ವರಿತವಾಗಿ ನ್ಯಾಯಾಲಯಗಳಲ್ಲಿ ತೀರ್ಪು ಹೊರಬಂದು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಬೀಳುವಂತೆ ಕಾನೂನುಗಳನ್ನು ಬಿಗಿಗೊಳಿಸುವ ಅವಶ್ಯಕತೆಯನ್ನು ತಿಳಿಸಿದರು.
ಲೇಪಾಕ್ಷಿ ಸಂತೋಷರಾವ್ ಮಾತನಾಡಿ ಇತ್ತೀಚೆಗೆ ನಾರ್ವೆ ದೇಶದಲ್ಲಿ ಪೋಷಕರಿಂದ ದಂಡಿಸಲ್ಪಟ್ಟ ಬಾಲಕಿ ಶಿಕ್ಷಕರಿಗೆ ದೂರು ನೀಡಿದ್ದು ಪೋಷಕರಿಗೆ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಮಕ್ಕಳಿಗೆ ತಿಳಿಸಿ, ಪೋಷಕರು ಸಹ ಒತ್ತಡಗಳ ಮಧ್ಯೆ ಮಕ್ಕಳನ್ನು ಶಿಕ್ಷಣಕ್ಕೆ ಒಳಪಡಿಸಬಾರದು ಎಂದು ಮನವಿ ಮಾಡಿದರು.
ರಕ್ಮಿಣಮ್ಮ, ಕಮಲಮ್ಮ, ಲಕ್ಷ್ಮೀನರಸಪ್ಪ, ಬಾಲಗಂಗಾಧರ್, ರೋಜಮ್ಮ ಮುಂತಾದವರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement