ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆನೆ ಹಾವಳಿ ಪ್ರದೇಶಗಳಿಗೆ ಶಾಸಕರ ಭೇಟಿ

Mainashree
Updated On : 8 Dec 2013, 11:12 am

ಬಂಗಾರಪೇಟೆ: ಕಳೆದ ತಿಂಗಳಿಂದ ಕ್ಷೇತ್ರದ ಗಡಿ ಪ್ರದೇಶದ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯಿಂದ ತತ್ತರಿಸಿ ಹೋಗಿರುವ ರೈತರನ್ನು ಸಮಾಧನಪಡಿಸಿ ಅವರಲ್ಲಿ ದೈರ್ಯ ತುಂಬಲು ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಹಾನಿಗೊಳಗಾದ ರೈತರ ತೋಟಗಳಿಗೆ ಬೇಟಿ ನೀಡಿ ಪರಿಶೀಲಿಸಿದರು.
ಸುಮಾರು 30ಕ್ಕೂ ಹೆಚ್ಚು ಆನೆಗಳ ಹಿಂಡು ಪ್ರತಿದಿನ ರೈತ ಹೊಲಗಳಿಗೆ ರಾತ್ರಿ ವೇಳೆ ನುಗ್ಗಿ ರಾಗಿ, ಬತ್ತ ಮತ್ತಿತರೆ ಬೆಳೆಯನ್ನು ನಾಶಪಡಿಸಿದೆ. ರಾತ್ರಿ ವೇಳೆ ಗ್ರಾಮಸ್ಥರು ಮನೆಗಳಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದ್ದರೂ ಸರ್ಕಾರ ರೈತರ ನೆರವಿಗೆ ದಾವಿಸದೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಸರ್ಕಾರ ಕಾರ್ಯೈಖರಿ ಬಗ್ಗ ಕಿಡಿಕಾರಿದರು.
ಆನೆಗಳ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿ ಬೆಳೆ ನಾಶವಾಗಿರುವ ತೊಪ್ಪನಹಳ್ಳಿ, ಬತ್ತಲಹಳ್ಳಿ, ತಮಟಮಾಕನಹಳ್ಳಿ, ಯರಗೋಳ್, ಕಳವಂಚಿ, ಶಿಲಿಂಗ ಮತ್ತಿತರೇ ಗ್ರಾಮದ ರೈತರಿಗೆ ಸರ್ಕಾರ ಕೂಡಲೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದು. ಮೋಹನ್ ಮೂರ್ತಿ, ಚಂಗಲರಾಯರೆಡ್ಡಿ, ಗಣೇಶ್, ಚಿಕ್ಕಯಲ್ಲಪ್ಪ, ರವಿನಾರಾಣರೆಡ್ಡಿ, ಬತ್ತಲಹಳ್ಳಿ ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement