ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಾವಯವ ಉತ್ಪನ್ನಗಳ ಕುರಿತು ಮಾಹಿತಿ

Mainashree
Updated On : 8 Dec 2013, 11:12 am

ಗುಡಿಬಂಡೆ: ಪಟ್ಟಣದ ವಾಹಿನಿ ಅಭಿವೃದ್ಧಿ ಸಂಸ್ಥೆ ಕಚೇರಿ ಆವರಣದಲ್ಲಿ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆ, ಚೆನೈ ಮೂಲದ ಡೆವಲಪ್ ಮೆಂಟ್ ಪ್ರಮೋಷನ್ ಗ್ರೂಪ್ ಹಾಗೂ ಸ್ಥಳೀಯ ವಾಹಿನಿ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸಾವಯವ ಕೃಷಿ ಉತ್ಪನ್ನಗಳ ಪ್ರಮಾಣೀಕರಣ ಕುರಿತ ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡೆವಲಪ್ ಮೆಂಟ್ ಪ್ರಮೋಷನ್ ಗ್ರೂಪ್ ಕಾರ್ಯನಿರ್ವಹಣಾಧಿಕಾರಿ ಆರ್. ಭಕ್ತರ್ ಸಾಲೋಮನ್, ಪ್ರತಿಯೊಬ್ಬ ರೈತನೂ ಸಾವಯವ ಕೃಷಿಯನ್ನು ಬಳಸಿ ಭೂ ತಾಯಿಯನ್ನು ಕಾಪಾಡಬೇಕೆಂದು ಸಲಹೆ ನೀಡಿದರು.
ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆಯ ಅಧಿಕಾರಿ ಸುಧೀರ್ ಕುಮಾರ್, ರೈತರು ತಾವು ಬೆಳೆದ ಸಾವಯವ ಉತ್ಪನ್ನಗಳನ್ನು ಪ್ರಮಾಣೀಕರಣ ಮಾಡಿಸುವುದಿಲ್ಲ. ಆದ್ದರಿಂದ ಅವರು ಬೆಳೆದ ಸಾವಯವ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಿಲ್ಲ ಎಂದರು. ವಾಹಿನಿ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ಎಚ್.ಆರ್. ಸುರೇಶ್ ಸಾವಯವ ಕೃಷಿ ಮಹತ್ವದ ಬಗ್ಗೆ ತಿಳಿಸಿದರು. ಅನಸೂಯ, ಕೆ. ಪದ್ಮನಾಭ, ಸಿ.ಎ. ಚಲಪತಿ, ಜಿ.ಟಿ. ಸವಿತ, ವಿ. ರಾಜಶೇಖರ್, ರಮೇಶ್, ಲಕ್ಷ್ಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement