ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗೆಲವು
ಗೌರಿಬಿದನೂರು: ತುಮಕೂರು ಜಿಲ್ಲೆ ಮಧುಗಿರಿಯಲ್ಲಿ 8 ರಂದು ನಡೆದ ರಾಜ್ಯಮಟ್ಟದ ಷುಟೋರಿಯೋ -ಡು -ಇಂಡಿಯಾ ಕರಾಟೆ ಸ್ಪರ್ಧೆಯಲ್ಲಿ ರಾಮಕೃಷ್ಣ ಶಾರದಾದೇವಿ ವಿದ್ಯಾಮಂದಿರ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ 3 ಪ್ರಥಮ, 2 ದ್ವಿತೀಯ, 1 ತೃತೀಯ ಬಹುಮಾನ ಗಳಿಸಿದ್ದಾರೆ.
ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಿಗೆ ಸಂಸ್ಥೆಯ ಕಾರ್ಯದರ್ಶಿ ವಿ.ಡಿ. ನಾಗೇಶ್ ಅಭಿನಂದಿಸಿದ್ದಾರೆ. ವೈಟ್ಲಿಪ್ಟಿಂಗ್ ದ್ವಿತೀಯ ಆರ್. ಮಧು ಶ್ರೀವತ್ಸ, ಎಲ್ಲೋ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ದಿನೇಶ್, ತೃತೀಯ ಸ್ಥಾನ ಮನೋಜ್, ಆರೆಂಜ್ ಬೆಲ್ಟ್ ವಿಭಾಗದಲ್ಲಿ ಪ್ರಥಮಸ್ಥಾನ ತರುಣ್, ಗ್ರೀನ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ನಂದಗಣೇಶ್, ದ್ವಿತೀಯ ಸ್ಥಾನ ನಿಖಿಲ್ ಸಮಾಧಾನಕರ ಬಹುಮಾನ ಅಶ್ವತ್ಥ ಭಾರದ್ವಾಜ್ ಪಡೆದಿದ್ದಾರೆ.
ಕೆಎಸ್ಆರ್ಟಿಸಿ ಚಾಲಕನ ಮೇಲೆ ಹಲ್ಲೆ
ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕ ಗಂಗಾಧರ್ ಎಂಬುವರ ಮೇಲೆ ವೈಯಕ್ತಿಕ ಕಾರಣಗಳಿಂದ ಹಲ್ಲೆ ಮಾಡಿದ ಆರೋಪದ ಮೇಲೆ ಖಾದ್ರಿಪುರದ ಗಜ, ರವಿ, ರಾಜ ಎಂಬುವರನ್ನು ಗಲ್ಪೇಟೆ ಪೊಲೀಸರು ಬಂಧಿಸಿದ್ದಾರೆ. ಮಕ್ಕಳಿಗೆ ತಿಂಡಿಯನ್ನು ತೆಗೆದುಕೊಂಡು ಮನೆಗೆ ಹೋಗುತ್ತಿದ್ದಾಗ ಈ ಮೂವರು ಆರೋಪಿಗಳು ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ದಾಖಲು ಮಾಡಲಾಗಿದೆ. ಪ್ರಕರಣ ದಾಖಲು ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಾಲಯ ಮೂವರು ಆರೋಪಿಗಳಿಗೆ ನ್ಯಾಯಾಂದ ಬಂಧನ ವಿಧಿಸಿದೆ.
ವ್ಯಕ್ತಿ ಮೇಲೆ ಹಲ್ಲೆ: ಕೋಲಾರ ತಾಲೂಕಿನ ಬ್ಯಾಲಹಳ್ಳಿಯ ನಿವಾಸಿ ಪ್ರಕಾಶ್ ಎಂಬುವರ ಮೇಲೆ ಕಳೆದ ರಾತ್ರಿ ಮುನಿವೆಂಕಟಪ್ಪ ಸೇರಿದಂತೆ ನಾಲ್ಕೈದು ಮಂದಿ ಹಲ್ಲೆ ನಡೆಸಿದ್ದು ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲು ಆಗಿದೆ.
ಸರಗಳ್ಳ ನ್ಯಾಯಾಂಗ ವಶಕ್ಕೆ: ಕೋಲಾರ ನಗರದ ಕಠಾರಿಪಾಳ್ಯದಲ್ಲಿ ಮಹಿಳೆಯ ಕೊರಳಿನಿಂದ ಸರ ಕದ್ದು ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದ ಶಿವಕುಮಾರನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
'ಅಂಬೇಡ್ಕರ್ ಮಹಾನ್ ಮಾನವತಾವಾದಿ'
ಮುಳಬಾಗಲು: ಡಾ.ಬಿ.ಆರ್. ಅಂಬೇಡ್ಕರ್ರವರು ಈ ಶತಮಾನ ಕಂಡ ಮಹಾನ್ ಮಾನವತಾವಾದಿ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು. ಪಟ್ಟಣದಲ್ಲಿ ಅಂಬೇಡ್ಕರ್ 57ನೇ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ವಿಗ್ರಹಕ್ಕೆ ಮಾಲಾರ್ಪಣೆ ನಡೆಸಿ ಮಾತನಾಡಿ, ಅಂಬೇಡ್ಕರ್ ವಿಗ್ರಹದ ಸುತ್ತಲು ದೀಪಗಳನ್ನು ಆಳವಡಿಸಲಾಗುವುದು. ಖಾಲಿಜಾಗದಲ್ಲಿ ಹೂವಿನ ಗಿಡ ಬೆಳೆಸಲು ಹಾಗೂ ಅದರ ನಿರ್ವಹಣೆಗೆ ಒಬ್ಬ ವ್ಯಕ್ತಿಯನ್ನು ನೇಮಿಸಲು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಮೆಕಾನಿಕ್ ಶ್ರೀನಿವಾಸ್, ಗೊಲ್ಲಹಳ್ಲಿ ವೆಂಕಟೇಶ್, ಯಾಮಣ್ಣ, ಜಮ್ಮನಹಳ್ಳಿ ಕೃಷ್ಣ, ಕೀಲಾಗಾಣೆ ಶೇಷಪ್ಪ, ಜಗದೀಶ್ ಇದ್ದರು.
ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯ
ಕೋಲಾರ: ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಯಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಜಿಲ್ಲಾ ಅಬಕಾರಿ ನಿರೀಕ್ಷರಿಗೆ ಮನವಿ ಸಲ್ಲಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ಜಿಲ್ಲಾ ಸಂಚಾಲಕ ಶ್ರೀನಿವಾಸಗೌಡ ಮಾತನಾಡಿ, ಗ್ರಾಮೀಣ ಜನತೆಯ ನೆಮ್ಮದಿ ಹಾಳು ಮಾಡುತ್ತಿರುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಜನತೆ ನಿರ್ಗತಿಕರಾಗುತ್ತಾರೆಂದು ಅಭಿಪ್ರಾಯಪಟ್ಟರು. ಹೂವಹಳ್ಳಿ ನಾಗರಾಜ್, ಬಂಗವಾದಿ ನಾಗರಾಜಗೌಡ, ಶಿವಾರೆಡ್ಡಿ, ರಮೇಶ್, ಗಂಗಾಧರ್, ಕೃಷ್ಣಪ್ಪ, ಕಾರಿ ವಿಶ್ವನಾಥ್, ಸುಬ್ರಮಣಿ, ಮಂಜುನಾಥ್, ಪುರುಷೋತ್ತಮ್, ಎ.ವಿ. ಚಂದ್ರಪ್ಪ, ರಾಜೇಶ್, ರಮೇಶ್, ಕೆಂಬೋಡಿ ಕೃಷ್ಣೇಗೌಡ, ಮುನಿರಾಜು ಇದ್ದರು.
ಮೆಚ್ಚುಗೆ ಪಡೆದ ವಸ್ತು ಪ್ರದರ್ಶನ
ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ 6 ರಿಂದ 10 ನೇತರಗತಿಯ ವಿದ್ಯಾರ್ಥಿಗಳು ವೈಜ್ಞಾನಿಕ, ಕ್ರೀಡಾ, ಧಾರ್ಮಿಕ ಸೇರಿದಂತೆ ಅನೇಕ ಕ್ಷೇತ್ರಗಳ ವಿಷಯಾಧಾರಿತ ಮಾಡೆಲ್ಗಳ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದಲ್ಲಿ ಬಾಬಾರವರ ಚರಿತ್ರೆ, ಸಾಮಾಜಿಕ ವಸ್ತುಗಳು, ಗಣಿತದ ವಿಜ್ಞಾನಿಗಳ ಚರಿತ್ರೆ, ಸೋಲಾರ್ ಶಕ್ತಿಯ ಉಪಯೋಗ, ಸಚಿನ್ ನಿವೃತ್ತಿ ಹೊಂದಿದ ಬಗ್ಗೆ ಸೇರಿದಂತೆ ಇತರೆ ಕ್ಷೇತ್ರಗಳ ಮಾಹಿತಿ ತಿಳಿಸಿದ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ವಿಶೇಷವಾಗಿ 10ನೇ ತರಗತಿ ವಿದ್ಯಾರ್ಥಿಗಳು ವಿಷ್ಣುವಿನ ದಶಾವತಾರ ತೋರಿಸಿ ಮೆಚ್ಚುಗೆಗೆ ಪಾತ್ರರಾದರು.