ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

13ಕ್ಕೆ ನಗರದಲ್ಲಿ ಶ್ರೀಕೃಷ್ಣ-ಅರ್ಜುನ ವೇಷಾವಳಿ ಸ್ಪರ್ಧೆ

Vishwanath S
Updated On : 11 Dec 2013, 1:03 am

ಚಿಕ್ಕಬಳ್ಳಾಪುರ: ಶಾಲಾ ಮಕ್ಕಳಲ್ಲಿ ಮೌಲ್ಯ ಬೆಳೆಸುವುದರ ಜತೆಗೆ ಪ್ರತಿಭೆ ಗುರುತಿಸುವ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ವಿಷ್ಣುಪ್ರಿಯ ಎಜುಕೇಷನ್ ಟ್ರಸ್ಟ್ ಡಿ.13 ರಂದು 16 ನೇ ವರ್ಷದ ಅಂತರಶಾಲಾ ಭಗವದ್ಗೀತೆ ಕಂಠಪಾಠ ಮತ್ತು ಶ್ರೀ ಕೃಷ್ಣ-ಅರ್ಜುನ ವೇಷಾವಳಿ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ವೈ.ಎನ್. ರಾಮಚಂದ್ರರೆಡ್ಡಿ, ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಮಾನವೀಯ ಮೌಲ್ಯಗಳು, ಆದರ್ಶಗಳನ್ನು ತಿಳಿಸಿ ಉತ್ತಮ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿಯನ್ನು ಪ್ರಮುಖವಾಗಿ ಪ್ರತಿಯೊಬ್ಬರು ನಿರ್ವಹಿಸಬೇಕು ಎಂದರು.
ಶ್ರೀ ಕೃಷ್ಣ ಭಗವದ್ಗೀತೆಯ ಮೂಲಕ ಒಳ್ಳೆಯ ಸಂದೇಶವನ್ನು ಜಗತ್ತಿಗೆ ನೀಡಿದ್ದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಗೀತೆಯ ಬಗ್ಗೆ ತಿಳಿದುಕೊಳ್ಳುವಂತಹುದು ಹೆಚ್ಚಿಗೆ ನಡೆಯುತ್ತದೆ. ಇಂತಹ ಮಹತ್ವವನ್ನು ಹೊಂದಿರುವ ಭಗವದ್ಗೀತೆಯ ಬಗ್ಗೆ ಮಕ್ಕಳು ತಿಳಿದುಕೊಳ್ಳುವಂತೆ ಮಾಡಲು ಗೀತಾ ಕಂಠಪಾಠ ಮತ್ತು ಶ್ರೀ ಕೃಷ್ಣ-ಅರ್ಜುನರ ವೇಷಾವಳಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಂತದಲ್ಲಿ ನಗರ ಮತ್ತು ಗ್ರಾಮೀಣ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ವಿಶೇಷ ಬಹುಮಾನ, ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಅಲ್ಲದೇ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆಯುವ 10 ನೇ ತರಗತಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪ್ರಥಮ ದರ್ಜೆ ಕಾಲೇಜಿಗೆ ದಾಖಲು ಮಾಡಿಕೊಳ್ಳಲಾಗುವುದು ಎಂದರು.
 ಡಿ.13 ರಂದು ಬೆಳಿಗ್ಗೆ ಶ್ರೀ ಕೃಷ್ಣ ಚೈತನ್ಯ ರಥೋತ್ಸವ, ಗೋಪೂಜೆ, ಗುರುವಂದನೆ ಮತ್ತು ಗೀತಾ ಯತ್ನ ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು ಶ್ರೀ ವಿವೇಕಾನಂದ ರಾಮಕೃಷ್ಣಾಶ್ರಮದ  ಪೂರ್ಣಾ ನಂದಮಹಾರಾಜ್ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಿದ್ಧಗಂಗಾಮಠದ ಶಿವಕುಮಾರಸ್ವಾಮೀಜಿ ಅರ್ಶೀವಚನ ನೀಡಲಿದ್ದಾರೆ, ರಾಮಕೃಷ್ಣ ಮಠದ ರಮಾನಂದಜೀ ಮಹಾರಾಜ್ ಸ್ವಾಮೀಜಿ, ಚಿತ್ರನಟ ಪ್ರೇಮ್, ನಿರ್ದೇಶಕ ಆರ್. ಚಂದ್ರು ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement